ಅತ್ಯಾಚಾರ ಸಂತ್ರಸ್ತೆಯೊಂದಿಗೆ ಮಹಿಳೆಯ ವಾಟ್ಸಾಪ್ ಚಾಟ್ ಬಗ್ಗೆ ಉಲ್ಲೇಖ: ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್ - Mahanayaka

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಮಹಿಳೆಯ ವಾಟ್ಸಾಪ್ ಚಾಟ್ ಬಗ್ಗೆ ಉಲ್ಲೇಖ: ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್

07/11/2024

ಅತ್ಯಾಚಾರ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿ ಜೊತೆಗೆ ಮಹಿಳೆಯ ನಡುವೆ ವಾಟ್ಸ್ಆ್ಯಪ್ ಸಂದೇಶಗಳು ವಿನಿಮಯವಾದ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ.

“ವಾಟ್ಸಾಪ್ ಚಾಟ್ ಗಳು ಆರೋಪಿಯಿಂದ ಬಲವಂತದ ಲೈಂಗಿಕ ಸಂಭೋಗದ ಆಗಿದೆ ಎಂಬ ಆರೋಪವನ್ನು ಸಂಪೂರ್ಣವಾಗಿ ಸುಳ್ಳಾಗಿಸಿದೆ” ಎಂದು ದೆಹಲಿ ನ್ಯಾಯಾಲಯವು ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸುವಾಗ ಹೇಳಿದೆ.

ಆರೋಪಿ ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಚಾಟ್ ಗಳು ತುಂಬಾ ವೈಯಕ್ತಿಕ ಮತ್ತು ಆಪ್ತವಾಗಿವೆ. ಮಹಿಳೆ ಮಾಡಿದ ಆರೋಪಗಳಿಗೆ ಇದು ಸಂಪೂರ್ಣ ವಿರುದ್ಧವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ನ್ಯಾಯಾಲಯದ ಪ್ರಕಾರ ಈ ಘಟನೆಯ ನಂತರ ಮಹಿಳೆ ಕಳುಹಿಸಿದ ಸಂದೇಶ ‘ಕುಚ್ ಮ್ಯಾಟ್ ಸೋಚ್ನಾ’ (ಯಾವುದೇ ತಪ್ಪಾಗಿ ಯೋಚಿಸಬೇಡಿ) ಎಂದಿದೆ.

“ಬಲವಂತದ ಲೈಂಗಿಕ ಸಂಭೋಗದ ಘಟನೆಯ ನಂತರ ತಕ್ಷಣ ಈ ರೀತಿಯ ವಾಟ್ಸಾಪ್ ಚಾಟ್ ಹೆಚ್ಚು ಅಸಂಭವವಾಗಿದೆ. ಇದು ಬಲವಂತದ ಲೈಂಗಿಕ ಸಂಬಂಧದ ಬಗ್ಗೆ ಪ್ರಾಸಿಕ್ಯೂಷನ್ ಪ್ರಕರಣವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯ ಸುತ್ತಲೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಈ ಘಟನೆ ನಡೆದಿದೆ ಎಂಬ ಆರೋಪವನ್ನು ಉಲ್ಲೇಖಿಸಿದ ನ್ಯಾಯಾಲಯ, ಯಾರ ಗಮನಕ್ಕೂ ಬಾರದಂತೆ ಸಾರ್ವಜನಿಕ ಸ್ಥಳದಲ್ಲಿ ಕಾರಿನೊಳಗೆ ಬಲವಂತವಾಗಿ ಅತ್ಯಾಚಾರ ಎಸಗುವುದು ಅಸಂಭವವೆಂದು ತೋರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ