ಒಂದು ಮುತ್ತಿಗೆ 50 ಸಾವಿರ ಡಿಮ್ಯಾಂಡ್: ಹನಿಟ್ರ್ಯಾಪ್ ಗ್ಯಾಂಗ್ ಬಂಧನ - Mahanayaka

ಒಂದು ಮುತ್ತಿಗೆ 50 ಸಾವಿರ ಡಿಮ್ಯಾಂಡ್: ಹನಿಟ್ರ್ಯಾಪ್ ಗ್ಯಾಂಗ್ ಬಂಧನ

shridevi
01/04/2025

ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಗೆ ಬೀಳಿಸಿದ ಮಹಿಳೆ ಹಾಗೂ ಗ್ಯಾಂಗ್ ಇದೀಗ ಸಿಸಿಬಿ ಪೊಲೀಸರ ಅತಿಥಿಗಳಾಗಿದ್ದಾರೆ.


Provided by

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಹಾಗೂ ಗ್ಯಾಂಗ್ ಬಂಧಿತರಾಗಿದ್ದಾರೆ. ಇವರು ರಾಕೇಶ್ ಎಂಬ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರೀಸ್ಕೂಲ್ ಗೆ ತನ್ನ ಮಕ್ಕಳನ್ನು ಡ್ರಾಪ್ ಮಾಡಲು ಉದ್ಯಮಿ ರಾಕೇಶ್ ಬರುತ್ತಿದ್ದ ವೇಳೆ ಶ್ರೀದೇವಿ ರುಡಿಗಿಯ ಪರಿಚಯವಾಗಿದೆ. ಈ ಸಂದರ್ಭದಲ್ಲಿ ತನ್ನ ಶಾಲೆ ನಿರ್ವಹಣೆ ಹಾಗೂ ತಂದೆಯ ಚಿಕಿತ್ಸೆಗೆಂದು ಶ್ರೀದೇವಿಯು ರಾಕೇಶ್ ಬಳಿಯಿಂದ 4 ಲಕ್ಷ ರೂ. ಸಾಲ ಕೇಳಿದ್ದಳು. 2024ರಂದು ಮಾರ್ಚ್ ನಲ್ಲಿ ಹಣ ಕೊಡುವುದಾಗಿ ಹೇಳಿ ಕೊಟ್ಟಿರಲಿಲ್ಲ. ಕೇಳಿದಾಗ ಈಗ ಕಷ್ಟವಿದೆ, ನೀವೂ ನಮ್ಮ ಶಾಲೆಯ ಪಾಟ್ನರ್ ಆಗಿ ಎಂದು ಆಫರ್ ಕೊಟ್ಟಿದ್ದಳು.

ಹೀಗಾಗಿ ಉದ್ಯಮಿ ಹಾಗೂ ಟೀಚರ್ ನಡುವೆ ಒಡನಾಟ ಹೆಚ್ಚಾಗಿದೆ. ಹೀಗಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಆದ್ರೆ ಉದ್ಯಮಿ ರಾಕೇಶ್ ಮತ್ತೆ ಹಣ ಕೇಳಿದಾಗ ಕೊಡಲು ಟೀಚರ್ ಒಪ್ಪಿರಲಿಲ್ಲ. ನಿನ್ನ ಜೊತೆ ರಿಲೇಶನ್ ಶಿಪ್ ನಲ್ಲಿ ಇರುವುದಾಗಿ ಆಕೆ ಹೇಳಿದ್ದಳು. ಆದರೆ ರಾಕೇಶ್ ಒಪ್ಪದೇ ಇದ್ದಾಗ, ಮನೆಗೆ ತೆರಳಿ ರಾಕೇಶ್ ಗೆ ಮುತ್ತಿಟ್ಟಿದ್ದಳು.

ಮುತ್ತಿಟ್ಟ ವಿಚಾರ ಹಿಡಿದು ಬ್ಲ್ಯಾಕ್ ಮೇಲ್ ಮಾಡಿದ ಟೀಚರ್ ಶ್ರೀದೇವಿ 50 ಸಾವಿರ ರೂಪಾಯಿಗೆ ಡಿಮ್ಯಾಂಡ್ ಇಟ್ಟು ಪಡೆದುಕೊಂಡಿದ್ದಳು. ನಂತರ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆಕೆಯ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ ಸಿಮ್ ನ್ನು ರಾಕೇಶ್ ಮುರಿದು ಹಾಕಿದ್ದರು.

ಆದರೂ ಬಿಡದ ಶ್ರೀದೇವಿ ರಾಕೇಶ್ ಪತ್ನಿಗೆ ಕರೆ ಮಾಡಿ ಮಕ್ಕಳ ಸ್ಕೂಲ್ ಟಿಸಿ ಕಳಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಳು. ಅದರಂತೆ ಪ್ರೀ ಸ್ಕೂಲ್ ಗೆ ರಾಕೇಶ್ ಹೋಗಿದ್ದಾಗ ಅಲ್ಲಿ ಶ್ರೀದೇವಿ ಜೊತೆ ಇತರ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಕೂಡಾ ಇದ್ದರು. ಶ್ರೀದೇವಿಗೆ ಸಾಗರ್ ಜೊತೆ ನಿಶ್ಚಿತಾರ್ಥ ಆಗಿದೆ. ಆದರೆ ನೀನ್ಯಾಕೆ ಆಕೆ ಜೊತೆ ಮಜಾ ಮಾಡುತ್ತಿದ್ದಿ ಎಂದು ಆರೋಪಿ ಗಣೇಶ ಬೆದರಿಕೆ ಹಾಕಿದ್ದ. ಅಲ್ಲದೆ ಈ ವಿಚಾರವನ್ನು ರಾಕೇಶ್ ಪತ್ನಿ ಸೇರಿದಂತೆ ಯಾರಿಗೂ ಹೇಳ್ಬಾರದೆಂದರೆ 1 ಕೋಟಿ ಕೊಡು ಎಂದು ಆರೋಪಿ ನೇಡಿಕೆ ಇಟ್ಟಿದ್ದ. ನಂತರ ಪುನಃ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಕೊನೆಗೆ 1.20 ಲಕ್ಷ ರೂಪಾಯಿ ಹಣ ಪಡೆದು ಬಿಟ್ಟು ಕಳಿಸಿದ್ದರು. ಉಳಿದ ಹಣವನ್ನೂ ಕೊಡುವಂತೆ ಪ್ರಾಣ ಬೆದರಿಕೆ ಹಾಕಿದ್ದಾಗಿ ರಾಕೇಶ್ ಆರೋಪ ಮಾಡಿದ್ದಾರೆ.

ಆರೋಪಿಗಳ ಉಪಟಳ ಅತಿಯಾಗುತ್ತಿದ್ದಂತೆಯೇ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ವಿಜಯಪುರ ಮೂಲದ ಆರೋಪಿಗಳಾದ ಶ್ರೀದೇವಿ, ಗಣೇಶ್ ಕಾಳೆ ಹಾಗೂ ಸಾಗರ್ ಮೋರೆ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ