ಹನಿಟ್ರ್ಯಾಪ್: ಟೀಸರ್ ನಲ್ಲಿ ಒಂದು, ಸಿನಿಮಾದಲ್ಲಿ ಮತ್ತೊಂದು: ನಿಖಿಲ್ ಕುಮಾರಸ್ವಾಮಿ

01/04/2025
ಬೆಂಗಳೂರು: ಸಚಿವರ ಹನಿಟ್ರ್ಯಾಪ್ ಕೇಸ್ ನಲ್ಲಿ ಟೀಸರ್ ನಲ್ಲಿ ಒಂದು ತೋರಿಸಿ, ಸಿನಿಮಾ ಬೇರೆಯೇ ರೀತಿಯಲ್ಲಿ ತೋರಿಸುವ ಕೆಲಸ ಆಗ್ತಾ ಇದೆ ಎಂದು ಜೆಡಿಎಸ್ ಯುವಕ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಚಿವರು ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಆರೋಪಿಸಿದರು. ಆದ್ರೆ ಈಗ ಅವರ ಮಗ ಕೊಲೆ ಯತ್ನ ಕೇಸ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇದೆಲ್ಲವನ್ನೂ ರಾಜ್ಯದ ಜನರಿಗೆ ಬಿಡುತ್ತೇನೆ ಎಂದು ನಿಖಿಲ್ ಹೇಳಿದರು.
ಮೊದಲು ಟೀಸರ್ ತೋರಿಸಿದರು, ಆದ್ರೆ ಒಳಗೆ ಸಿನಿಮಾ ಬೇರೆಯೇ ಆಗಿದೆ. ಹನಿಟ್ರ್ಯಾಪ್ ಪ್ರಜಾಪ್ರಭುತ್ವಕ್ಕೆ ಮಾರಕ. ಯಾವುದೋ ಸ್ಥಾನದ ಮೇಲೆ ಅಪೇಕ್ಷೆ ಇಟ್ಟವರು ಅಡ್ಡದಾರಿ ಹಿಡಿದು ವಾಮಮಾರ್ಗದಲ್ಲಿ ತೇಜೋವಧೆ ಮಾಡುವುದು ಸರಿಯಲ್ಲ. ಇದು ಸಮಾಜಕ್ಕೆ ಮಾರಕ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: