ಕೊಳಲು ನುಡಿಸುವ ಆಸೆ, ಓದಲು ಇಷ್ಟವಿಲ್ಲದೇ ವಿದ್ಯಾರ್ಥಿ ಸಾವಿಗೆ ಶರಣು! - Mahanayaka

ಕೊಳಲು ನುಡಿಸುವ ಆಸೆ, ಓದಲು ಇಷ್ಟವಿಲ್ಲದೇ ವಿದ್ಯಾರ್ಥಿ ಸಾವಿಗೆ ಶರಣು!

dhruva
30/09/2024


Provided by

ಚಿಕ್ಕಮಗಳೂರು:  ಕೊಳಲು ನುಡಿಸುವ ಆಸೆ, ಓದಲು ಇಷ್ಟವಿಲ್ಲದ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾಗಿರುವ ಘಟನೆ  ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ಧ್ರುವ‌ (16) ಸಾವಿಗೆ ಶರಣಾದ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಈತ ಪಿಜಿಯಲ್ಲಿ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಧ್ರುವ  ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ವಿದ್ಯಾರ್ಥಿಯಾಗಿದ್ದಾನೆ.

ಪೋಷಕರ ಬಳಿ ಓದಲು ಇಷ್ಟವಿಲ್ಲ, ಕೊಳಲು ನುಡಿಸುವ ಕ್ಲಾಸ್ ಗೆ ಹೋಗ್ತೀನಿ ಅಂತಿದ್ದ  ಎನ್ನಲಾಗಿದೆ.  10ನೇ ತರಗತಿ ಮುಗಿಯಲಿ ಆಮೇಲೆ ಹೋಗು ಎಂದು ಪೋಷಕರು ಹೇಳಿದ್ದರಂತೆ.

ಶೃಂಗೇರಿ ಪಟ್ಟಣದ ಶಾಲೆಯೊಂದರಲ್ಲಿ ಬಾಲಕ 10ನೇ ತರಗತಿ ಓದುತ್ತಿದ್ದ. ಧ್ರುವ ಮಧ್ಯ ವಾರ್ಷಿಕ ಪರೀಕ್ಷೆಗೆ ಬಾರದ ಕಾರಣ ವಿದ್ಯಾರ್ಥಿಯ ಅಜ್ಜನಿಗೆ ಶಾಲೆ ಮುಖ್ಯಸ್ಥರು ಫೋನ್ ಮಾಡಿದ್ದರು.  ಅಜ್ಜ ಪಿಜಿಗೆ ಬಂದಾಗ ಬಾಲಕ ಸಾವಿಗೆ ಶರಣಾಗಿರುವುದು ಗೊತ್ತಾಗಿದೆ.

ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ