ದೇವರ ರಥದಡಿಯಲ್ಲಿ ಸಿಲುಕಿದ ಭಕ್ತ ಸಾವು!
13/03/2021
ಯಾದಗಿರಿ: ದೇವರ ರಥದಡಿಯಲ್ಲಿ ಸಿಲುಕಿದ ಭಕ್ತನೋರ್ವ ಒಂದು ವಾರಗಳ ಕಾಲ ಜೀವನ್ಮರಣ ಹೋರಾಟದ ಬಳಿಕ ಇಂದು ಸಾವನ್ನಪ್ಪಿದ್ದು, ಮಾರ್ಚ್ 5ರಂದು ಗ್ರಾಮ ದೇವತೆ ರಥೋತ್ಸವದ ವೇಳೆ ಈ ಘಟನೆ ನಡೆದಿತ್ತು.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಥೋತ್ಸವದ ವೇಳೆ ರಮೇಶ್ ಎಂಬವರು ರಥದಡಿಗೆ ಸಿಲುಕಿದ್ದರು. ಜನಸಮೂಹದ ನೂಕಾಟ, ತಳ್ಳಾಟದಿಂದ ಆಯತಪ್ಪಿ ಅವರು ರಥದಡಿಗೆ ಬಿದ್ದಿದ್ದರು. ರಥದಡಿಗೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ರಥೋತ್ಸವದ ವೇಳೆ ಸೂಕ್ತ ಬಂದೋಬಸ್ತ್ ಒದಗಿಸದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜನರ ಗುಂಪಿನ ನಡುವೆ ರಥವನ್ನು ಎಳೆಯುವ ಸಂದರ್ಭದಲ್ಲಿ ಇಂತಹ ಅಚಾತುರ್ಯಗಳು ನಡೆಯುತ್ತಿವೆ. ಇನ್ನೂ ಈ ಘಟನೆಗೆ ಪ್ರಾಣಿ ಬಲಿಯ ವಿಚಾರವಾಗಿಯೂ ಬಣ್ಣಕಟ್ಟಲಾಗಿದೆ ಎಂದು ಹೇಳಲಾಗಿದೆ. ಪ್ರಾಣಿಗಳನ್ನು ಕೊಲ್ಲದೇ ತಿನ್ನುವುದು ಹೇಗೆ? ಎನ್ನುವ ಪ್ರಶ್ನೆಗಳೂ ಇದರ ಹಿಂದೆ ಕೇಳಿ ಬಂದಿದೆ.