ರಾಜ್ಯದ ಮಾದಲ ದೃಷ್ಟಿವಿಶೇಷ ಚೇತನ ನಿರ್ದೇಶಕರಾಗಿ ಎಂ.ರಾಜಶೇಖರ ಮೂರ್ತಿ ಆಯ್ಕೆ - Mahanayaka

ರಾಜ್ಯದ ಮಾದಲ ದೃಷ್ಟಿವಿಶೇಷ ಚೇತನ ನಿರ್ದೇಶಕರಾಗಿ ಎಂ.ರಾಜಶೇಖರ ಮೂರ್ತಿ ಆಯ್ಕೆ

rajashekhara murthy
18/11/2024

ಚಾಮರಾಜನಗರ: ತಾಲೂಕಿನ ಉಡಿಗಾಲ ಗ್ರಾಮದ  ಲೇಟ್ ಮಾದಯ್ಯ  ಮತ್ತು ಪಾರ್ವತಮ್ಮ ನವರ ದಂಪತಿಗಳ ಮಗನಾದ ಶ್ರೀ ರಾಜಶೇಖರ ಮೂರ್ತಿ ಎಂ. ರವರು ಕೆಪಿಎಸ್ಸಿಯಿಂದ ನ್ಯಾಯಾಂಗ ಇಲಾಖೆಗೆ 2012 ರಲ್ಲಿ ಆಯ್ಕೆಯಾಗಿ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೋಕಿನಹಿರಿಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ಯಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿ ವೃತ್ತಿ ಆರಂಭಿಸಿ ವೈಯಕ್ತಿಕ ಕಾರಣಗಳಿಂದ 2018-19 ರಲ್ಲಿ ಚಾಮರಾಜನಗರಕ್ಕೆ  ವರ್ಗಾವಣೆ ಪಡೆದರು.

ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ರವರ ನ್ಯಾಯಾಲಯದಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ, ದಿ.16-11-2024 ರಂದು ನಡೆದ  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ  ಎರಡು ಸ್ಥಾನಕ್ಕೆ ನಡೆದ ತೀವ್ರ ಪೈಪೋಟಿಯ  ನಡುವೆ  ಇವರ ಪ್ರಾಮಾಣಿಕತೆ, ಪ್ರಬುದ್ಧತೆಗೆ ನೌಕರವರ್ಗ ಮತ ಚಲಾಯಿಸಿ ಜಯ ಮೂಡಿಗೇರಿಸಿಕೊಂಡು ಈಗ ರಾಜ್ಯದಲ್ಲಿ ಪ್ರಥಮ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿದ್ದಾರೆ   ವಿಶೇಷವೆಂದರೆ ಇವರು ದೃಷ್ಟಿ ವಿಶೇಷ ಚೇತನರಾಗಿದ್ದರು ಸಾಮಾನ್ಯ ಪ್ರತಿಸ್ಪರ್ಧಿಗಳ ನಡುವೆ ಪೈಪೋಟಿ ನೀಡಿ ಆಯ್ಕೆಯಾಗಿ ರಾಜ್ಯದಲ್ಲಿ ಮುನ್ನುಡಿ ಬರೆದಿದ್ದಾರೆ, ಇವರನ್ನು  ಎಲ್ಲರೂ ಅಭಿನಂದಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ