ಪದೇ ಪದೇ ಮೂತ್ರ ಬರುವುದು ಸೇರಿದಂತೆ ಈ 6 ಲಕ್ಷಣ ಕಂಡು ಬಂದರೆ ಕಡೆಗಣಿಸಬೇಡಿ! - Mahanayaka
12:26 AM Tuesday 3 - December 2024

ಪದೇ ಪದೇ ಮೂತ್ರ ಬರುವುದು ಸೇರಿದಂತೆ ಈ 6 ಲಕ್ಷಣ ಕಂಡು ಬಂದರೆ ಕಡೆಗಣಿಸಬೇಡಿ!

Kidney failure
09/11/2024

ಅಧಿಕ ರಕ್ತದೊತ್ತಡ, ಟೈಪ್ 2 ಡಯಾಬಿಟಿಸ್, ಮೂತ್ರಪಿಂಡ ವೈಫಲ್ಯದ ಕುಟುಂಬದ ಇತಿಹಾಸ ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟವಟ್ಟರು ವರ್ಷಕ್ಕೊಮ್ಮೆ ಮೂತ್ರಪಿಂಡ ಪರೀಕ್ಷೆಗೆ ಒಳಗಾಗುವುದು ಅವಶ್ಯಕ ಎಂದು ವೈದ್ಯರು ಸಲಹೆ ನೀಡುತ್ತಾರೆ. ಮೂತ್ರಪಿಂಡದ ಸಮಸ್ಯೆ ಸೂಚಿಸುವ ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

ಪದೇ ಪದೇ ಮೂತ್ರ ಬರುವುದು:

ಮೂತ್ರಪಿಂಡದ ತೊಂದರೆ ಅಥವಾ ಸಿಕಲ್ ಸೆಲ್ ಅನಿಮಿಯಾದಿಂದ ಉಂಟಾಗುವ ಮೂತ್ರಪಿಂಡದ ಉರಿಯೂತ ಅಥವಾ ಮೂತ್ರಪಿಂಡದ ಹಾನಿಯಂತಹ ತೊಂದರೆಗಳನ್ನು ಹೊಂದಿರುವ ಹಲವರು, ಅತಿಯಾದ ಮೂತ್ರ ವಿಸರ್ಜನೆಯ ಸಮಸ್ಯೆಯನ್ನು ಹೊಂದಿರಬಹುದು. ಏಕೆಂದರೆ ಈ ಸಮಸ್ಯೆಗಳು ಮೂತ್ರಪಿಂಡಗಳಿಂದ ಮರುಹೀರಿಕೊಳ್ಳುವ ದ್ರವದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪದೇ ಪದೇ ಮೂತ್ರ ಬರುವಂತೆ ಎನ್ನಿಸುವುದರಿಂದ ನಿದ್ದೆಗೂ ತೊಂದರೆಯಾಗಿ ಇದು ದಣಿದ ಭಾವನೆ ಉಂಟು ಮಾಡುತ್ತದೆ.

ಒಣ ಚರ್ಮ ಹಾಗೂ ತುರಿಕೆ:

ಮೂತ್ರಪಿಂಡಗಳು ಆರೋಗ್ಯದಿಂದಿರುವಾಗ ಅವು ಅನೇಕ ಪ್ರಮುಖ ಕೆಲಸಗಳನ್ನು ನಿರ್ವಹಿಸುತ್ತವೆ. ನಮ್ಮ ದೇಹದಿಂದ ತ್ಯಾಜ್ಯಗಳು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದರಿಂದ ಕೆಂಪು ರಕ್ತ ಕಣಗಳನ್ನ ಉತ್ಪಾದಿಸಲು ಸಹಾಯ ಮಾಡುವುದು, ಮೂಳೆಗಳನ್ನು ಬಲವಾಗಿರಿಸುವುದು ಮತ್ತು ರಕ್ತದಲ್ಲಿ ಸರಿಯಾದ ಪ್ರಮಾಣದ ಖನಿಜಗಳನ್ನು ಕಾಪಾಡಿಕೊಳ್ಳಲು ನೆರವಾಗುವುದು ಇಂತಹ ಕೆಲಸಗಳನ್ನು ಮಾಡುತ್ತದೆ.

ನೊರೆ ಹಾಗೂ ವಾಸನೆಯಿಂದ ಕೂಡಿದ ಮೂತ್ರ:

ನಿಮ್ಮ ಮೂತ್ರವು ವಾಸನೆಯಿಂದ ಕೂಡಿದ್ದು ನೊರೆ ನೊರೆಯಾಗಿ ಕಂಡರೆ ಇದು ಮೂತ್ರದಲ್ಲಿ ಪ್ರೊಟೀನ್ ಅನ್ನು ಸೂಚಿಸುತ್ತದೆ. ಮೊಟ್ಟೆಯನ್ನು ಒಡೆದು ಕಲೆಸುವಾಗ ಕಾಣಿಸುವ ನೊರೆಯಂತೆ ಮೂತ್ರದಲ್ಲಿ ನೊರೆ ಕಾಣಿಸಿದರೆ ಇದು ಮೂತ್ರದ ಸಮಸ್ಯೆಯನ್ನು ಸೂಚಿಸಬಹುದು. ಈ ರೀತಿ ಮೂತ್ರ ವಿರ್ಸಜನೆಯಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕಣಕಾಲು ಮತ್ತು ಪಾದಗಳಲ್ಲಿ ಊತ:

ಮೂತ್ರಪಿಂಡವು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಇದು ಉಪ್ಪಿನಾಂಶ ಸಂಗ್ರಹಕ್ಕೆ ಕಾರಣವಾಗುತ್ತದೆ. ಇದರಿಂದ ಪಾದಗಳು ಹಾಗೂ ಕಣಕಾಲಿನಲ್ಲಿ ಊತ ಶುರುವಾಗುತ್ತದೆ. ಕಣಕಾಲಿನ ಕೆಳಗೆ ಊತ ಕಾಣಿಸಿದರೆ ಅದು ಹೃದ್ರೋಗ, ಯಕೃತ್ತಿನ ಕಾಯಿಲೆಯ ಸಂಕೇತವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ.

ಸ್ನಾಯು ಸೆಳೆತ:

ಕಿಡ್ನಿ ಸಮಸ್ಯೆ ಹೆಚ್ಚಾದಂತೆ ಸ್ನಾಯು ಸೆಳೆತ ಉಂಟಾಗಬಹುದು. ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನವು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುವುದು ಮತ್ತು ರಂಜಕದ ಪ್ರಮಾಣವು ನಿಯಂತ್ರಣದಲ್ಲಿ ಇಲ್ಲದೇ ಇರುವುದು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು.

ಶಕ್ತಿಯ ಹಾಗೂ ಏಕಾಗ್ರತೆಯ ಕೊರತೆ:

ರಕ್ತದಲ್ಲಿ ವಿಷ ಮತ್ತು ಕಲ್ಮಶಗಳು ಸಂಗ್ರಹವಾಗುವುದರಿಂದ ಮೂತ್ರಪಿಂಡದ ಕಾರ್ಯವು ಕಡಿಮೆಯಾಗುತ್ತದೆ. ಇದರಿಂದಾಗಿ ನಿಶಕ್ತಿ, ದಣಿವು, ದೌರ್ಬಲ್ಯದಂತಹ ಸಮಸ್ಯೆಗಳು ಎದುರಾಗಬಹುದು. ಅಲ್ಲದೇ ನಿಮಗೆ ಯಾವುದೇ ಕೆಲಸದ ಮೇಲೆ ಗಮನ ಹರಿಸಲು ಕಷ್ಟವಾಗಬಹುದು.

ಈ ಲಕ್ಷಣಗಳು ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತವೆ. ಈ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಮೂತ್ರಪಿಂಡದ ವೈಫಲ್ಯವನ್ನು ತಪ್ಪಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ