ರಸ್ತೆಯಲ್ಲಿ ಆನೆಯನ್ನು ನೋಡಿಯೂ ಕಾರು ಚಲಾಯಿಸಿದ ಚಾಲಕ: ಇಂತಹವರಿಗೆ ಏನನ್ನ ಬೇಕು ಎಂದ ಜನ

ಚಿಕ್ಕಮಗಳೂರು: ಆನೆಯನ್ನ ನೋಡಿ…ನೋಡಿ… ಹಿಂಗ್ ಮಾಡಿದ್ರೆ ಏನ್ ಹೇಳಬೇಕು, ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ದುಸ್ಸಾಹಸ ಕಂಡು ಪ್ರಜ್ಞಾವಂತ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಪಕ್ಕದಲ್ಲೇ ದೈತ್ಯ ಕಾಡಾನೆ ನಿಂತಿದ್ರು ವಾಹನ ಚಾಲನೆ ಮಾಡುವ ಮೂಲಕ ಕಾರು ಚಾಲಕ ಹುಚ್ಚಾಟ ಮೆರೆದಿದ್ದಾನೆ. ಆನೆ ಒಂದು ಹೆಜ್ಜೆ ಹಿಂದೆ ಇಟ್ಟರೂ, ತಿರುಗಿ ಸೊಂಡಿಲಿನಲ್ಲಿ ಹೊಡೆದರೂ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು.
ಚಾರ್ಮಾಡಿಯಲ್ಲಿ ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತ ಓಡಕ್ಕೂ ಜಾಗ ಇರಲ್ಲ ಇಂತಹ ಸಂದರ್ಭದಲ್ಲಿ ಆನೆಯನ್ನು ಕಂಡೂ ನಿರ್ಲಕ್ಷ್ಯತನದಿಂದ ಕಾರು ಚಲಾಯಿಸುವುದು ಎಷ್ಟು ಸರಿ. ಪ್ರಾಣ ಉಳಿದರೆ ಎಷ್ಟು ಹೊತ್ತಾದರೂ ಮತ್ತೆ ಕೂಡ ಹೋಗಬಹುದು, ತಡವಾಗುತ್ತೆ ಅಂತ ಸ್ವಲ್ಪವೂ ತಾಳ್ಮೆ ಇಲ್ಲದೇ, ಅದೃಷ್ಟ ಪರೀಕ್ಷೆಗೆ ಮುಂದಾಗುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಕೇಳಿ ಬಂದಿದೆ.
ಕಾರಿನಲ್ಲಿ ಮಕ್ಕಳು–ವೃದ್ಧರೂ ಇದ್ರೆ ಏನ್ ಮಾಡೋದು, ಪ್ರವಾಸಿಗರು, ವಾಹನ ಚಾಲಕರು ಇಂತಹ ದುಸ್ಸಾಹಸಕ್ಕೆ ಕೈ ಹಾಕೋದನ್ನ ಬಿಡಬೇಕು ಎಂದು ಎಷ್ಟು ಹೇಳಿದರೂ ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD