ಬಸ್ ನಲ್ಲಿ ನಮಾಝ್ ಮಾಡಿದ್ದ ಚಾಲಕ ಅಮಾನತು! - Mahanayaka
9:24 AM Thursday 22 - January 2026

ಬಸ್ ನಲ್ಲಿ ನಮಾಝ್ ಮಾಡಿದ್ದ ಚಾಲಕ ಅಮಾನತು!

m r mulla
01/05/2025

ಹಾವೇರಿ: ಬಸ್ ನಲ್ಲಿ ನಮಾಝ್ ಮಾಡಿದ ಚಾಲಕ ಎ.ಆರ್.ಮುಲ್ಲಾ ಎಂಬವರನ್ನು ಅಮಾನತು ಮಾಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಆದೇಶಿಸಿದ್ದಾರೆ.

ಕರ್ತವ್ಯದ ವೇಳೆಯಲ್ಲೇ ಮಾರ್ಗಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಲಾಗಿದೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಜರುಗಿಸಲಾಗಿದೆ.

ಹಾನಗಲ್ ಘಟಕದ ಚಾಲಕ ಎ.ಆರ್.ಮುಲ್ಲಾ ಕಾರ್ಯನಿರತ ವೇಳೆ ರಸ್ತೆ ಪಕ್ಕ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.  ಈ ವಿಡಿಯೋಗೆ ಸಂಬಂಧಿಸಿದಂತೆ ಕಾರ್ಮಿಕರ ದಿನಾಚರಣೆಯ ದಿನವಾರ ಮೇ 1ರಂದೇ ಚಾಲಕನ ಅಮಾನತು ಆದೇಶ ಹೊರಬಿದ್ದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ