ಈ 3 ವಿಷಯ  ಸರ್ಚ್ ಮಾಡಿದರೆ ನೀವು ಜೈಲು ಸೇರುವುದು ಗ್ಯಾರಂಟಿ! - Mahanayaka
10:33 AM Saturday 23 - August 2025

ಈ 3 ವಿಷಯ  ಸರ್ಚ್ ಮಾಡಿದರೆ ನೀವು ಜೈಲು ಸೇರುವುದು ಗ್ಯಾರಂಟಿ!

google search
12/05/2022


Provided by

ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್.  ಜನರು ಅರ್ಥವಿರುವ ಅಥವಾ ಅಗತ್ಯವಿಲ್ಲದ ಕೆಲವು ವಿಷಯಗಳನ್ನು ಗೂಗಲ್‌ ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ ಅವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಕೆಲವೊಂದು ವಿಚಾರಗಳನ್ನು ನಾವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಅದರಿಂದ ನಾವು ಕಾನೂನು ಕ್ರಮದ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಸುಮ್ಮನೆ ಕುತೂಹಲಕ್ಕೂ ಇಂತಹ ವಿಚಾರಗಳನ್ನು ಗೂಗಲ್ ನಲ್ಲಿ ಹುಡುಕುವುದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.

ಬಾಂಬ್ ತಯಾರಿಸುವುದು ಹೇಗೆ?

ಬಾಂಬ್ ತಯಾರಿಸುವುದು ಹೇಗೆ ಎಂದು ತಿಳಿಯಲು ನೀವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ, ನಿಮ್ಮ ಮೇಲೆ ಅನುಮಾನ ಸೃಷ್ಠಿಯಾಗುತ್ತದೆ. ನೀವು ಯಾವುದೇ ದುರುದ್ದೇಶವಿಲ್ಲದೆ ಕೇವಲ ಕುತೂಹಲಕ್ಕೆ ಕೂಡ ಈ ರೀತಿಯಾಗಿ ಸರ್ಚ್ ಮಾಡಿದರೂ ನಿಮ್ಮ ಮೇಲೆ ಸೈಬರ್ ಸೆಲ್ ಕಣ್ಣಿಡಬಹುದು.  ಇಂತಹ ಅನುಮಾನಾಸ್ಪದ ಮತ್ತು ಅನಾವಶ್ಯಕ ವಿಷಯಗಳನ್ನುಗೂಗಲ್‌ ಸರ್ಚ್‌ ಮಾಡುವುದನ್ನು ತಪ್ಪಿಸಿ. ಏಕೆಂದರೆ, ಇಂತಹ ಚಟುವಟಿಕೆಗಳನ್ನು ಸೈಬರ್ ಸೆಲ್ ಮೇಲ್ವಿಚಾರಣೆ ಮಾಡುತ್ತದೆ. ಈ ರೀತಿಯ ಅನುಮಾನಾಸ್ಪದ ವಿಷಯಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಹಲವು ಸಂದರ್ಭಗಳಲ್ಲಿ ನೀವು ಜೈಲಿಗೆ ಸಹ ಹೋಗಬೇಕಾಗಬಹುದು.

ಮಕ್ಕಳ ಅಶ್ಲೀಲತೆ

ಮಕ್ಕಳ ಅಶ್ಲೀಲತೆಯ ಬಗ್ಗೆ ಭಾರತ ಸರ್ಕಾರವು ತುಂಬಾ ಕಟ್ಟುನಿಟ್ಟಾಗಿದೆ. ಗೂಗಲ್‌ ನಲ್ಲಿ ಮಕ್ಕಳ ಅಶ್ಲೀಲತೆಯನ್ನು ಹುಡುಕುವುದು, ವೀಕ್ಷಿಸುವುದು ಅಥವಾ ಹಂಚಿಕೊಳ್ಳುವುದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದರೆ ಜೈಲು ಪಾಲಾಗಬಹುದು. ಈಗಾಗಲೇ ಭಾರತದಲ್ಲಿ ಸಮರೋಪಾದಿಯಲ್ಲಿ, ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವವರನ್ನು ಜಾಲಾಡಿ, ಕ್ರಮಕೈಗೊಳ್ಳಲಾಗುತ್ತಿದೆ.

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಇದರಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹಾಗೂ ಸಂಬಂಧಿಸಿದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ವಿಚಾರಗಳನ್ನು ಸರ್ಚ್ ಮಾಡುವವರು ಉದ್ದೇಶ ಪೂರ್ವಕವಾಗಿಯೇ ಚರ್ಚ್ ಮಾಡುತ್ತಾರೆ ಹಾಗಾಗಿ ಈ ಬಗ್ಗೆ ಯಾರೂ ಯಾವುದೇ ಕನಿಕರವಿಲ್ಲದೇ ಕ್ರಮಕೈಗೊಳ್ಳಬೇಕಾಗಿರುವುದು ಅಗತ್ಯವಾಗಿದೆ.

ಗರ್ಭಪಾತ ಮಾಡುವುದು ಹೇಗೆ?

ಗೂಗಲ್‌ ನಲ್ಲಿ ಗರ್ಭಪಾತ ವಿಧಾನಗಳನ್ನು ಹುಡುಕುವುದು ಸಹ ಅಪರಾಧದ ವರ್ಗಕ್ಕೆ ಸೇರುತ್ತದೆ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ. ಗರ್ಭಪಾತ ಎನ್ನುವುದು ಕೊಲೆಗೆ ಸಮಾನವಾದ ಅಪರಾಧವಾಗಿದೆ. ಮದುವೆಗೆ ಮುಂಚಿತವಾಗಿ ಗರ್ಭ ಧರಿಸಿದವರು, ಸಮಾಜದ ಕೊಳಕು ಬಾಯಿಗೆ ಹೆದರಿ ಗರ್ಭಪಾತಕ್ಕೆ ಮುಂದಾಗುತ್ತಾರೆ, ಇನ್ನು ಕೆಲವರು ಹೆಣ್ಣು ಮಗು ಬೇಡ ಎಂದು ಗರ್ಭಪಾತ ಮಾಡಿಸುವವರಿದ್ದಾರೆ. ಸಾಕಷ್ಟು ಸಂಖ್ಯೆಯ ಜನರು ವೈದ್ಯರ ಸಲಹೆ ಇಲ್ಲದೇ ಗರ್ಭಪಾತ ಮಾಡಿಸಿಕೊಳ್ಳುವುದಿಲ್ಲ. ಆದರೆ, ಇನ್ನು ಕೆಲವರು ಸ್ವಯಂ ಆಗಿ ಗರ್ಭಪಾತ ಮಾಡಿಕೊಳ್ಳಲು ಮುಂದಾಗುತ್ತಾರೆ.

ವೈದ್ಯರ ಸಲಹೆ ಇಲ್ಲದೇ ಗರ್ಭಪಾತ ಮಾಡಿಸಿಕೊಳ್ಳುವುದು  ಅಪಾಯಕಾರಿಯಾಗಿದ್ದು, ಗೂಗಲ್ ನಲ್ಲಿ ಗರ್ಭಪಾತದ ವಿಧಾನಗಳನ್ನು ಹುಡುಕುವುದು ಅಪರಾಧದ ವಿಭಾಗಕ್ಕೆ ಸೇರ್ಪಡೆಯಾಗುತ್ತದೆ.

ಯಾವುದೇ ವಿಚಾರಗಳಲ್ಲಿ ಒಳ್ಳೆಯದೂ ಇರುತ್ತವೆ ಕೆಟ್ಟದ್ದೂ ಇರುತ್ತವೆ. ಹಾಗೆಯೇ ಎಲ್ಲವೂ ಸಿಗುವ ಗೂಗಲ್ ಸರ್ಚ್ ನಲ್ಲಿ ನಾವು ಒಳ್ಳೆಯದ್ದನ್ನು ಮಾತ್ರವೇ ಹುಡುಕಬೇಕಿದೆ. ನನ್ನ ಮೊಬೈಲ್ ನಲ್ಲಿ, ನನ್ನ ಕಂಪ್ಯೂಟರ್ ನಲ್ಲಿ ನಾನು ಏನಾದರೂ ಹುಡುಕಿದರೆ, ಬೇರೆಯವರಿಗೆ ತಿಳಿಯುವುದಿಲ್ಲ ಎನ್ನುವ ಮನೋಭಾವ ಬೇಡ. ದೇಶದ ಭದ್ರತೆಗೆ, ಸ್ವಾಸ್ಥ್ಯತೆಗೆ ಧಕ್ಕೆ ಬರುವಂತಹ ಯಾವುದೇ ವಿಚಾರಗಳನ್ನು ನೀವು ಗೂಗಲ್ ಸರ್ಚ್ ನಲ್ಲಿ  ಹುಡುಕಾಡಿದರೆ, ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ ಅಂತ ಹೆಸರಿಡಿ: ಮತ್ತೊಂದು ವಿವಾದ ಆರಂಭ

ಧ್ವನಿವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ: ಎಷ್ಟು ಗಂಟೆವರೆಗೆ ಧ್ವನಿವರ್ಧಕ ಬಳಸಬಹುದು?

ವಿದ್ಯುತ್ ಸ್ಪರ್ಶದಿಂದ ಜೂ.ರವಿಚಂದ್ರನ್ ಸಾವು

ಮೈಸೂರು ಮೃಗಾಲಯ: ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ!

ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ