ವಿಜಯ್ ದೇವರಕೊಂಡ ಮನೆ ಮೇಲೆ ಇಡಿ ದಾಳಿ: ಲೈಗರ್ ಚಿತ್ರದ ಬಂಡವಾಳದ ಬಗ್ಗೆ ಪ್ರಶ್ನೆ! - Mahanayaka

ವಿಜಯ್ ದೇವರಕೊಂಡ ಮನೆ ಮೇಲೆ ಇಡಿ ದಾಳಿ: ಲೈಗರ್ ಚಿತ್ರದ ಬಂಡವಾಳದ ಬಗ್ಗೆ ಪ್ರಶ್ನೆ!

vijay devarakonda
30/11/2022

ಹೈದರಾಬಾದ್: ‘ಲೈಗರ್’ ಚಿತ್ರಕ್ಕೆ ‘ಅಕ್ರಮ’ ವಿದೇಶಿ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಟ ವಿಜಯ್ ದೇವರಕೊಂಡ ಅವರನ್ನು ವಿಚಾರಣೆ ನಡೆಸಿದೆ.

ನವೆಂಬರ್ 30 ರಂದು ಬೆಳಿಗ್ಗೆ 8:30ರಿಂದ ವಿಜಯ್ ದೇವರಕೊಂಡ ಅವರನ್ನು ವಿಚಾರಣೆ ನಡೆಸಿರುವುದಾಗಿ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಜಯ್ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಅನನ್ಯಾ ಪಾಂಡೆ ಅವರೊಂದಿಗೆ ಸ್ಪೋರ್ಟ್ಸ್ ಆಕ್ಷನ್ ಚಿತ್ರ ‘ಲೈಗರ್’ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದರು. ಈ ಚಿತ್ರವೂ ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲವಾಗಿತ್ತು, ಇದರ ಜೊತೆಗೆ ಚಿತ್ರತಂಡಕ್ಕೆ ಅಕ್ರಮ ವಿದೇಶಿ ಹಣಕಾಸು  ನೀಡಿದ ಪ್ರಕರಣ ಇದೀಗ ಸುತ್ತಿಕೊಂಡಿದೆ.

ನವೆಂಬರ್ 17 ರಂದು ‘ಲೈಗರ್’ ತಯಾರಕರಾದ ಪುರಿ ಜಗನ್ನಾಥ್ ಮತ್ತು ಚಾರ್ಮಿ ಅವರಿಗೆ ಚಲನಚಿತ್ರಕ್ಕೆ ವಿದೇಶಿ ಹೂಡಿಕೆ ಅಥವಾ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಥವಾ ಫೆಮಾವನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಮನ್ಸ್ ಜಾರಿ ಮಾಡಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ