ಮಾನವನ ಮುಖವನ್ನೇ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ
ಮಾನವನ ಮುಖವನ್ನೇ ಹೋಲುವ ಮರಿಗೆ ಮೇಕೆಯೊಂದು ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದ್ದು, ಈ ಮೇಕೆ ಮರಿಯನ್ನು ಕಂಡು ಮೇಕೆಯ ಮಾಲಿಕರು ಹಾಗೂ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸಿರೋಂಜ್ ತಹಸಿಲ್ ನ ಸೆಮಲ್ ಖೇಡಿ ಎಂಬ ಗ್ರಾಮದಲ್ಲಿ ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ನವಾಬ್ ಖಾನ್ ಎಂಬವರ ಮನೆಯ ಮೇಕೆಯೊಂದು ಮರಿ ಹಾಕಿದ್ದು, ಈ ಮೇಕೆ ಮರಿಯ ಮುಖ ಮಾನವನ ಮುಖವನ್ನು ಹೋಲುತ್ತಿದೆ.
ಸದ್ಯ ಈ ಮೇಕೆ ಮರಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫೋಟೋವನ್ನು ಕಂಡು ಜನರು ಅಚ್ಚರಿಗೀಡಾಗಿದ್ದಾರೆ. ಮನುಷ್ಯನ ಕಣ್ಣಿನಂತೆ ಎರಡು ಕಣ್ಣುಗಳು ನೋಡಲು ಕನ್ನಡಕ ತೊಡಿಸಿದಂತೆ ಕಾಣುತ್ತದೆ. ತಲೆಯ ಮೇಲೆ ಬಿಳಿ ಬಣ್ಣದ ಕೂದಲುಗಳಿವೆ. ನೋಡಲು ಮನುಷ್ಯನ ಮುಖವನ್ನೇ ಈ ಮೇಕೆ ಹೋಲುತ್ತಿದೆ.
ಮೇಕೆ ಮರಿಯ ವಿಚಿತ್ರ ಮುಖದ ಕಾರಣದಿಂದಾಗಿ ಅದಕ್ಕೆ ಸಿರಿಂಜ್ ನಿಂದಲೇ ಹಾಲುಣಿಸುವಂತಾಗಿದೆ. ಈ ರೀತಿಯ ವಿಚಿತ್ರ ಜನನಕ್ಕೆ ಹೆಡ್ ಡಿಸ್ಪೆಪ್ಸಿಯಾ ಎಂಬ ಅಸ್ವಸ್ಥತೆ ಕಾರಣ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾರ್ವಜನಿಕರು ಇದೊಂದು ಪವಾಡ ಎಂಬಂತೆ ಮಾತನಾಡುತ್ತಿದ್ದಾರೆ.
मध्यप्रदेश के सिरोंज का हैरतअंगैज मामला, एक बकरी ने दिया इंसान जैसी शक्ल वाले बच्चे को जन्म😱😱#madhyapradesh #mpnews #sironj #goat #human #reelvideo #reelsinstagram #trendingreelsvideo #birth #animal #viralvideo #madhya_pradesh #india #videoclip #shortvideoreels #Reels pic.twitter.com/HGDL0OHT5A
— News Track (@newstracklive) November 12, 2022
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka