ಅಮೆರಿಕಾದ ಬಹು ಪ್ರಸಿದ್ಧ ಯುನಿವರ್ಸಿಟಿ ವಿರುದ್ಧ ಕೇಳಿಬಂತು ಪಕ್ಷಪಾತದ ಆರೋಪ: ತನಿಖೆಗೆ ಆದೇಶ - Mahanayaka
8:48 PM Tuesday 27 - February 2024

ಅಮೆರಿಕಾದ ಬಹು ಪ್ರಸಿದ್ಧ ಯುನಿವರ್ಸಿಟಿ ವಿರುದ್ಧ ಕೇಳಿಬಂತು ಪಕ್ಷಪಾತದ ಆರೋಪ: ತನಿಖೆಗೆ ಆದೇಶ

08/02/2024

ಅಮೆರಿಕಾದ ಬಹು ಪ್ರಸಿದ್ಧ ಯುನಿವರ್ಸಿಟಿಯಾದ ಹಾರ್ವರ್ಡ್ ನಲ್ಲಿ ಮುಸ್ಲಿಂ ಮತ್ತು ಫೆಲೆಸ್ತೀನಿ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತದಿಂದ ನಡೆದುಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವುದಾಗಿ ವಿಶ್ವವಿದ್ಯಾಲಯ ಹೇಳಿದೆ. ಹಾರ್ವರ್ಡ್ ವಿರುದ್ಧ ಮುಸ್ಲಿಂ ಲೀಗಲ್ ಫಂಡ್ ಆಫ್ ಅಮೆರಿಕ ನೀಡಿರುವ ದೂರಿನಂತೆ ಈ ತನಿಖೆ ನಡೆಯಲಿದೆ.

ಪೀಡನೆ ಮತ್ತು ಭೀತಿಯಿಂದ ನಮಗೆ ರಕ್ಷಣೆ ಕೊಡುವುದಕ್ಕೆ ವಿಶ್ವವಿದ್ಯಾಲಯ ವಿಫಲವಾಗಿದೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದರು.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ ಅಮೇರಿಕಾದ ಕ್ಯಾಂಪಸ್ ಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ತೀವ್ರ ಪಕ್ಷಪಾತದ ವರ್ತನೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಹಾರ್ವರ್ಡ್ ಸಹಿತ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತದ ಮತ್ತು ಇಸ್ಲಾಮೊ ಫೋಬಿಯಾದ ವರ್ತನೆಗಳು ಹೆಚ್ಚಾಗಿದ್ದು ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಮತ್ತು ತನಿಖೆ ನಡೆಸಬೇಕೆಂಬ ಒತ್ತಾಯ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಇತ್ತೀಚಿನ ಸುದ್ದಿ