ನಿರಾಶ್ರಿತ ಶಿಬಿರದಲ್ಲೇ 15ರ ಪೋರನ ಸಂಶೋಧನೆ: ವಿದ್ಯುತ್ ಉತ್ಪಾದನೆಯ ಯಂತ್ರ ಕಂಡು ಹಿಡಿದ ಬಾಲಕ
ಇಸ್ರೇಲ್ ನ ಬಾಂಬ್ ನಿಂದಾಗಿ ಮನೆಮಠ ಕಳೆದು ರಫಾದ ನಿರಾಶ್ರಿತ ಶಿಬಿರದಲ್ಲಿ ಕಳೆಯುತ್ತಿರುವ 15 ವರ್ಷದ ಪೋರನೋರ್ವ ಸ್ವತಃ ವಿದ್ಯುತ್ ಉತ್ಪಾದನೆಯ ಯಂತ್ರವನ್ನು ಸಂಶೋಧಿಸಿ ಜಾಗತಿಕವಾಗಿ ಅಚ್ಚರಿಗೆ ಕಾರಣವಾಗಿದ್ದಾನೆ. ಹುಸಾಮ್ ಅಲ್ ಅತ್ತರ್ ಎಂಬ ಹೆಸರಿನ ಈ ಬಾಲಕ ಮತ್ತು ಆತನ ಕುಟುಂಬ ಪಶ್ಚಿಮ ಗಾಝಾದಿಂದ ನಿರಾಶ್ರಿತರಾಗಿ ರಫಾದ ಗಡಿಗೆ ವರ್ಗಾವಣೆಗೊಂಡಿದೆ. ರಾತ್ರಿ ಎಲ್ಲೆಲ್ಲೂ ಕತ್ತಲು. ಈ ಕತ್ತಲೆಯನ್ನು ಓಡಿಸುವುದಕ್ಕಾಗಿ ಆತ ಪಟ್ಟ ಶ್ರಮ ಇದೀಗ ಜಗತ್ತಿನ ಗಮನವನ್ನು ಸೆಳೆದಿದೆ.
ಹಳೆ ಸಾಮಾಗ್ರಿಗಳನ್ನು ಮಾರುವ ಅಂಗಡಿಯಿಂದ ಎರಡು ಫ್ಯಾನ್‌ಗಳನ್ನು ಈ ಪೋರ ಖರೀದಿಸಿದ್ದಾನೆ. ಬಳಿಕ ಅದಕ್ಕೆ ಅಗತ್ಯವಾಗಿರುವ ವಯರ್ ಮತ್ತು ಇನ್ನಿತರ ಉಪಕರಣಗಳನ್ನು ಜೋಡಿಸಿದ್ದಾನೆ. ಬ್ಯಾಟರಿಗಳನ್ನು ಜೋಡಿಸುವುದಕ್ಕೆ ಸೂಕ್ತವಾಗುವಂತೆ ಫ್ಯಾನುಗಳನ್ನು ಒಂದರ ಮೇಲೆ ಇನ್ನೊಂದರಂತೆ ಜೋಡಿಸಿದ್ದಾನೆ. ಈ ಮೂಲಕ ಫ್ಯಾನ್ ತಿರುಗುವಾಗ ವಿದ್ಯುತ್ ಉತ್ಪಾದನೆಯಾಗುವಂತೆ ನೋಡಿಕೊಂಡಿದ್ದಾನೆ.
ಈತನ ಈ ಸಂಶೋಧನೆಯ ಸಂಶೋಧನೆಯು ಗಾಝಾದ ಎಲ್ಲೆಡೆ ಮನೆ ಮಾತಾಗಿದೆ. ಇದೀಗ ಈತನನ್ನು ಗಾಝಾದ ನ್ಯೂಟನ್ ಎಂಬ ಕರೆಯಲಾಗುತ್ತಿದೆ
ಒಂದು ಆಪಲ್ ತಲೆಗೆ ಬಿದ್ದ ಕಾರಣದಿಂದ ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ.. ನಾನಾದರೋ ಕತ್ತಲೆಯಿಂದ ಹೊರಬರುವುದಕ್ಕಾಗಿ ವಿದ್ಯುತ್ತನ್ನು ಕಂಡುಹಿಡಿದೆ ಎಂದು ಬಾಲಕ ಮುಗ್ಧವಾಗಿ ಹೇಳಿದ್ದಾನೆ.