ಅಡಿಕೆ, ಕಾಳುಮೆಣಸಿಗೆ ಔಷಧಿ ಸಿಂಪರಣೆ ಮಾಡುವ ವೇಳೆ ವಿದ್ಯುತ್ ಶಾಕ್ - Mahanayaka
10:22 AM Monday 15 - December 2025

ಅಡಿಕೆ, ಕಾಳುಮೆಣಸಿಗೆ ಔಷಧಿ ಸಿಂಪರಣೆ ಮಾಡುವ ವೇಳೆ ವಿದ್ಯುತ್ ಶಾಕ್

death
30/10/2024

ಕೊಟ್ಟಿಗೆಹಾರ: ಅಡಿಕೆ ಮತ್ತು ಕಾಳುಮೆಣಸಿಗೆ ಔಷಧಿ ಸಿಂಪರಣೆ ಮಾಡುವ ವೇಳೆ  ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕರೋರ್ವರು ಮೃತಪಟ್ಟಿರುವ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ಮತ್ತಿಕಟ್ಟೆಯಲ್ಲಿ ನಡೆದಿದೆ.

ಕೊಟ್ಟಿಗೆಹಾರ ಮತ್ತಿಕಟ್ಟೆ ಗ್ರಾಮದ ಎಕ್ಬಾಲ್ ಎಸ್ಟೇಟ್ ನಲ್ಲಿ ಬುಧವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ತೋಟದಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಸ್ಪ್ರೇ ಮಾಡುತ್ತಿದ್ದ ವೇಳೆ  ಅಲುಮಿನಿಯಂ ದೋಟಿ ವಿದ್ಯುತ್ ಲೈನಿಗೆ ತಾಗಿದ್ದು ಇದರಿಂದ ವಿದ್ಯುತ್ ಪ್ರವಹಿಸಿ ಕಾರ್ಮಿಕ ತೀವ್ರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೃತ ಕಾರ್ಮಿಕ ಉತ್ತರಪ್ರದೇಶ ಮೂಲದ ರತನ್ ಲಾಲ್ (27 ವರ್ಷ) ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ