ಹೆಣ ಊಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟ ಹಳ್ಳಿಗರು
ಚಿಕ್ಕಮಗಳೂರು: ಹೆಣ ಊಳಲು ಜಾಗವಿಲ್ಲದೆ ಹಳ್ಳಿಗರು ಪಂಚಾಯಿತಿ ಮುಂದೆ ಮೃತದೇಹವಿಟ್ಟ ಘಟನೆ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ 1200 ಮನೆಗಳ ಗ್ರಾಮಕ್ಕೆ ಹೆಣ ಊಳಲು ಸ್ಮಶಾನವೇ ಇಲ್ಲ. ರಂಗನಾಥ್ (75) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಮೃತದೇಹ ಊಳಲು ಜಾಗವಿಲ್ಲದೆ ಗ್ರಾ.ಪಂ. ಮುಂದೆ ಉಡೇವಾ ಗ್ರಾಮಸ್ಥರು ಮೃತದೇಹವನ್ನಿಟ್ಟಿದ್ದಾರೆ.
ಸ್ಮಶಾನದ ಜಾಗವಿದೆ, ಉಳ್ಳವರು ಒತ್ತುವರಿ ಮಾಡಿ ತೋಟ ಮಾಡಿದ್ದಾರೆ. ಕಳೆದ 50 ವರ್ಷಗಳಿಂದಲೂ ಸ್ಮಶಾನವಿಲ್ಲದೆ ಇರುವ ಗ್ರಾಮವಾಗಿ ಇಲ್ಲಿನ ಜನರು ಕಷ್ಟಪಡುತ್ತಿದ್ದಾರೆ.
ಇಷ್ಟು ವರ್ಷ ಸಾವನ್ನಪ್ಪಿದವರನ್ನ ಮನೆಯವರು ತಮ್ಮ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಮೃತ ರಂಗನಾಥ್ ಗ್ರಾಮಸ್ಥರೇ ಆದರೂ ಮನೆಯವರು ಇಲ್ಲ, ಸ್ವಂತ ಜಾಗವೂ ಇಲ್ಲ. ಹೀಗಾಗಿ ಗ್ರಾಮಸ್ಥರೇ ಅಂತ್ಯ ಸಂಸ್ಕಾರಕ್ಕೆ ಮುಂದಾದರೂ ಅಂತ್ಯಸಂಸ್ಕಾರ ನಡೆಸಲು ಜಾಗವಿಲ್ಲ.
ಹತ್ತಾರು ಬಾರಿ ಗ್ರಾಪಂ ಗಮನಕ್ಕೆ ತಂದರೂ ನೋ.. ಯೂಸ್. ಹೀಗಾಗಿ ಇಂದು ಮೃತದೇಹವನ್ನು ಪಂಚಾಯಿತಿ ಮುಂದಿಟ್ಟು ಪ್ರತಿಭಟನೆ ನಡೆಸಲಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಕಾದು ನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: