ಶರಣ್ ಪಂಪ್ ವೆಲ್ ಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ - Mahanayaka

ಶರಣ್ ಪಂಪ್ ವೆಲ್ ಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

sharan pumpwell
06/07/2025

ಚಿಕ್ಕಮಗಳೂರು: ಕೋಮುದ್ವೇಷ ಹರಡುವ ಭಾಷಣಕಾರ ಶರಣ್ ಪಂಪ್ ವೆಲ್ ಗೆ ಚಿಕ್ಕಮಗಳೂರು ಪ್ರವೇಶಕ್ಕೆ  ಒಂದು ತಿಂಗಳ ಕಾಲ ಸಂಪೂರ್ಣ ನಿಷೇಧ ಹೇರಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮುಂದಿನ 30 ದಿನಗಳ ಕಾಲ ಪಂಪ್ ವೆಲ್ ಗೆ ಚಿಕ್ಕಮಗಳೂರು ಜಿಲ್ಲೆಗೆ ನಿರ್ಬಂಧ ಹೊರಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ನೀಡಿದ್ದಾರೆ.

ಪಂಪ ವೆಲ್  ಕೋಮುದ್ವೇಷ ಹರಡುವ ಭಾಷಣ ಮಾಡುವ ಪ್ರವೃತ್ತಿ ಉಳ್ಳವರಾಗಿದ್ದಾರೆ, ಇವರ ಪ್ರಚೋದನಾಕಾರಿ ಭಾಷಣದಿಂದ ಗಲಾಟೆ,  ಗುಂಪು ಘರ್ಷಣೆ ಸನ್ನಿವೇಶಗಳಿವೆ. ಚಿಕ್ಕಮಗಳೂರು ಸೇರಿ ಕೆಲ ಪಟ್ಟಣಗಳು ಮತೀಯ ಸೂಕ್ಷ್ಮ ಪ್ರದೇಶವಾಗಿದೆ, ಸಣ್ಣ ಘಟನೆಯೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಭಂಗ ತರುವ ಸಾಧ್ಯತೆಗಳಿವೆ ಹೀಗಾಗಿ 6–7–25 ರಿಂದ 4—8–25ರ 30 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.

ಶರಣ್ ಪಂಪ್ ವೆಲ್ ಮೇಲೆ 22ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ, ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರಿನಲ್ಲಿ ಪಂಪ್ ವೆಲ್ ಕರೆಸಿ ಬೈಠಕ್ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ , ಮುಂದಿನ 30 ದಿನಗಳ ಕಾಲ ಪಂಪ್ ವೆಲ್ ಗೆ ಚಿಕ್ಕಮಗಳೂರು ಜಿಲ್ಲೆಗೆ ನಿರ್ಬಂಧ ಹೇರಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ