'ನನ್ನನ್ನು ಕೊಲ್ಲಲು ಪ್ಲ್ಯಾನ್ ಮಾಡಲಾಗಿತ್ತು': ಬಾಂಗ್ಲಾ ಮಾಜಿ‌ ಪ್ರಧಾನಿ ಶೇಖ್ ಹಸೀನಾ ಭಾವನಾತ್ಮಕ ಆಡಿಯೋ ವೈರಲ್ - Mahanayaka
9:05 PM Wednesday 12 - February 2025

‘ನನ್ನನ್ನು ಕೊಲ್ಲಲು ಪ್ಲ್ಯಾನ್ ಮಾಡಲಾಗಿತ್ತು’: ಬಾಂಗ್ಲಾ ಮಾಜಿ‌ ಪ್ರಧಾನಿ ಶೇಖ್ ಹಸೀನಾ ಭಾವನಾತ್ಮಕ ಆಡಿಯೋ ವೈರಲ್

18/01/2025

ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಪಲಾಯನ ಗೈದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರ ಭಾವನಾತ್ಮಕ ಆಡಿಯೋ ಸಂದೇಶ ಬಿಡುಗಡೆಯಾಗಿದೆ. ರಾಜಕೀಯ ವಿರೋಧಿಗಳು ತಮ್ಮ ಮೇಲೆ ನಡೆಸಿದ ಹತ್ಯೆ ಪ್ರಯತ್ನಗಳ ಬಗ್ಗೆ ಶೇಖ್ ಹಸೀನಾ ಮಾತನಾಡುವ ಆಡಿಯೋ ಸಂದೇಶವೊಂದು ಹೊರಬಿದ್ದಿದೆ. ಅವಾಮಿ ಲೀಗ್ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಈ ಸಂದೇಶವನ್ನು ಬಿಡುಗಡೆ ಮಾಡಿದೆ.

ತನ್ನ ರಾಜಕೀಯ ವಿರೋಧಿಗಳು ತನ್ನನ್ನು ಮತ್ತು ತನ್ನ ಸಹೋದರಿ ಶೇಖ್ ರೆಹಾನಾಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಹಸೀನಾ ಬಿಡುಗಡೆ ಮಾಡಿದ ಆಡಿಯೋದಲ್ಲಿ ಹೇಳಿದ್ದಾರೆ. ಪ್ರತಿಭಟನಾಕಾರರು ಪ್ರಧಾನ ಮಂತ್ರಿಯ ನಿವಾಸವಾದ ಗೋನೊ ಭವನಕ್ಕೆ ನುಗ್ಗಿದ್ದರು. ಎರಡು ದಿನಗಳ ಘರ್ಷಣೆಯಲ್ಲಿ 157 ಜನರು ಸಾವನ್ನಪ್ಪಿದ್ದರು. ನಾವು ಕೇವಲ 20-25 ನಿಮಿಷಗಳಲ್ಲಿ ಸಾವಿನಿಂದ ಪಾರಾಗಿದ್ದೇವೆ. ದಾಳಿಯಿಂದ ಬದುಕುಳಿಯಲು, ಅಲ್ಲಾಹನಿಗೆ ಇಚ್ಛಾಶಕ್ತಿ ಇದ್ದಿರಬೇಕು” ಎಂದು ಹಸೀನಾ ಆಡಿಯೋದಲ್ಲಿ ತಿಳಿಸಿದ್ದಾರೆ.

ಆಗಸ್ಟ್ 21, 2004 ರಂದು ನಡೆದ ಗ್ರೆನೇಡ್ ದಾಳಿಯಿಂದ ಹಸೀನಾ ಗಾಯಗಳೊಂದಿಗೆ ಪಾರಾಗಿದ್ದರು. ಆ ದಿನ ನಡೆದ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದರು. ಹಸೀನಾ ತನ್ನ ಸಂದೇಶದಲ್ಲಿ ಜುಲೈ 2000 ದಲ್ಲಿ ನಡೆದ ಬಾಂಬ್ ದಾಳಿಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ . ನನ್ನ ದೇಶ ಮತ್ತು ಮನೆ ಇಲ್ಲದೆ ನಾನು ಬಳಲುತ್ತಿದ್ದೇನೆ. ಎಲ್ಲವೂ ಸುಟ್ಟುಹೋಗಿದೆ ಎಂದು ಶೇಖ್ ಹಸೀನಾ ಕಣ್ಣೀರು ಹಾಕುತ್ತಾ ಹೇಳಿದರು.

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕಳೆದ ವರ್ಷ ಆಗಸ್ಟ್ 5 ರಂದು ತನ್ನ ಸಹೋದರಿ ರೆಹಾನಾ ಜೊತೆ ಢಾಕಾದಿಂದ ಹೊರಟಿದ್ದ ಹಸೀನಾ, ಭಾರತದಲ್ಲಿ ಆಶ್ರಯ ಕೋರಿದ್ದರು. ಬಾಂಗ್ಲಾದೇಶವು ಹಸೀನಾ ಅರನ್ನು ತಕ್ಷಣ ಗಡಿಪಾರು ಮಾಡುವಂತೆ ಭಾರತವನ್ನು ಕೋರಿದೆ. ಆದರೆ ಭಾರತ ಅದಕ್ಕೆ ಸಿದ್ಧವಿಲ್ಲ. ಫೆಬ್ರವರಿ 12 ರೊಳಗೆ ಶೇಖ್ ಹಸೀನಾ ಮತ್ತು ಅವರ ಸಹಚರರನ್ನು ಬಂಧಿಸಿ ಹಾಜರುಪಡಿಸುವಂತೆ ಢಾಕಾ ನ್ಯಾಯಾಲಯ ಆದೇಶಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ