ದೆಹಲಿಯ ಗಡಿಭಾಗದಲ್ಲಿ ನಡೆಯಲಿದೆ ಮಹಾ ಹೋರಾಟ: 200 ರಷ್ಟು ರೈತ ಸಂಘಟನೆಗಳಿಂದ ಪ್ರತಿಭಟನೆಗೆ ಸಿದ್ದತೆ - Mahanayaka
4:57 AM Thursday 16 - October 2025

ದೆಹಲಿಯ ಗಡಿಭಾಗದಲ್ಲಿ ನಡೆಯಲಿದೆ ಮಹಾ ಹೋರಾಟ: 200 ರಷ್ಟು ರೈತ ಸಂಘಟನೆಗಳಿಂದ ಪ್ರತಿಭಟನೆಗೆ ಸಿದ್ದತೆ

10/02/2024

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿವೆ. ದೆಹಲಿಯ ಗಡಿಭಾಗ ಮತ್ತೆ ರೈತ ಪ್ರತಿಭಟನೆಯ ಕಾವು ಏರಿಸಿಕೊಳ್ಳಲು ಮತ್ತೆ ಸಜ್ಜಾಗುತ್ತಿದೆ. ಇನ್ನೂರಷ್ಟು ರೈತ ಸಂಘಟನೆಗಳು
ದೆಹಲಿಯತ್ತ ಪ್ರತಿಭಟನೆ ಸಾಗಲು ಸಿದ್ಧವಾಗುತ್ತಿವೆ.


Provided by

ಕೃಷಿ ವಲಯಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಈ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ. ಫೆಬ್ರವರಿ 13ರಿಂದ ‘ದೆಹಲಿ ಚಲೋ’ ನಡೆಯಲಿದೆ. ಹೌದು.

ಕಿಸಾನ್ ಮಜ್‌ದೂರ್ ಸಂಘರ್ಷ್ ಸಮಿತಿ ಮತ್ತು ಅದರಿಂದ ವಿಭಜನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ ರಾಜಕೀಯೇತರ) ನೇತೃತ್ವದಲ್ಲಿ ಫೆಬ್ರವರಿ 13ರಿಂದ ‘ದೆಹಲಿ ಚಲೋ’ ನಡೆಯಲಿದೆ. ಫೆಬ್ರವರಿ 16ರಿಂದ ‘ಗ್ರಾಮೀಣ ಭಾರತ್ ಬಂದ್’ಗಾಗಿ ಎಸ್‌ಕೆಎಂ ನೇತೃತ್ವದಲ್ಲಿ ರೈತರು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಸಿದ್ಧತೆ ನಡೆಸುತ್ತಿವೆ.

“ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸಂಬಂಧಿಸಿ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸದಿರುವ ವಿರುದ್ಧ ರೈತಸಂಘಟನೆಗಳು ಚಳವಳಿ ನಡೆಸಲಿವೆ. ದೆಹಲಿ ಚಲೋ ಮತ್ತು ಗ್ರಾಮೀಣ ಭಾರತ್ ಬಂದ್ ಯೋಜನೆಗಳಿಗೆ ರೈತರು ಸಿದ್ಧತೆ ನಡೆಸುತ್ತಿರುವುದನ್ನು ಕಂಡಲ್ಲಿ 2020ರಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆ ಪುನರಾವರ್ತನೆಯಾಗುವ ಸೂಚನೆ ಕಂಡುಬರುತ್ತಿದೆ.

ಕೇಂದ್ರ ಸಚಿವರು ಶೀಘ್ರವೇ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಫೆಬ್ರವರಿ 13ರ ಮೊದಲು ಅವರು ನಮ್ಮ ಬೇಡಿಕೆಗಳಿಗೆ ನಿಶ್ಚಿತ ಪರಿಹಾರಗಳನ್ನು ನೀಡಲು ಕೇಂದ್ರ ಸರ್ಕಾರ ಪ್ರಯತ್ನಿಸಿದಲ್ಲಿ ಪರಸ್ಪರ ಹಿತಾಸಕ್ತಿಯನ್ನು ಗಮನಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಇಲ್ಲದಿದ್ದರೆ ‘ದೆಹಲಿ ಚಲೋ’ ನಿರ್ಧಾರ ಬದಲಾಗದು” ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ