ಬಿಲ್ಕಿಸ್ ಬಾನು‌ ಪ್ರಕರಣ: ಜೈಲು ಸೇರಿ 15 ದಿನ ಆಗುವಷ್ಟರಲ್ಲೇ ಆರೋಪಿ ಪ್ರದೀಪ್ ಮೋದಿಗೆ ಪೆರೋಲ್ - Mahanayaka
2:14 AM Tuesday 27 - February 2024

ಬಿಲ್ಕಿಸ್ ಬಾನು‌ ಪ್ರಕರಣ: ಜೈಲು ಸೇರಿ 15 ದಿನ ಆಗುವಷ್ಟರಲ್ಲೇ ಆರೋಪಿ ಪ್ರದೀಪ್ ಮೋದಿಗೆ ಪೆರೋಲ್

10/02/2024

ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಜೈಲು ಸೇರಿ 15 ದಿನಗಳಾಗುವಷ್ಟರಲ್ಲೇ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಗುಜರಾತ್ ಹೈ ಕೋರ್ಟ್ ನ ನಿರ್ದೇಶನದಂತೆ ಪ್ರದೀಪ್ ಮೋದಿ ಎಂಬ ಪಾತಕಿಗೆ ಪೆರೋಲ್ ಮೂಲಕ ಬಿಡುಗಡೆ ನೀಡಲಾಗಿದೆ.

ಈತನ ಪತ್ನಿಯ ತಂದೆ ನಿಧನರಾಗಿದ್ದು ಈ ಹಿನ್ನೆಲೆಯಲ್ಲಿ ಐದು ದಿನಗಳ ಪೆರೋಲ್ ನೀಡಲಾಗಿದೆ. ಜಸ್ಟಿಸ್ ಎಂ ಆರ್ ಮೆಂಗ್ ದೆ ಅವರು ಈತನ ಈ ಪೆರೋಲ್ ಅರ್ಜಿಯನ್ನು ಸ್ವೀಕರಿಸಿದ್ದಾರೆ. ಈತ 30 ದಿನಗಳ ಪೆರೊಲ್ ಗಾಗಿ ಮನವಿ ಮಾಡಿಕೊಂಡಿದ್ದ. ಈತ ಮತ್ತು ಈತನ ಜೊತೆಗೆ ಮತ್ತೆ ಜೈಲು ಸೇರಿದ 10 ಮಂದಿ ಅಪರಾಧಿಗಳು ಗೋದ್ರಾ ಸಬ್ ಜೈಲಿನಲ್ಲಿದ್ದಾರೆ.

 

ಪ್ರಾಸಿಕ್ಯೂಷನ್ ಅವರು ಈ ಹಿಂದಿನ ಬಿಡುಗಡೆಗಳನ್ನು ಸೂಚಿಸುವ ಜೈಲು ದಾಖಲೆಗಳನ್ನು ಸಲ್ಲಿಸಿದ ನಂತರ ಮತ್ತು ಜೈಲು ಅಧಿಕಾರಿಗಳ ಮುಂದೆ ಸಮಯಕ್ಕೆ ಸರಿಯಾಗಿ ವರದಿ ಮಾಡಿದ ನಂತರ ನ್ಯಾಯಾಲಯವು ಈ ಆದೇಶವನ್ನು ಮಾಡಿತು.

ಇತ್ತೀಚಿನ ಸುದ್ದಿ