ಪ್ರಧಾನಿ ಉದ್ಘಾಟಿಸಿದ್ದ ಸುರಂಗ ಮಾರ್ಗ ಅಸುರಕ್ಷಿತ ಮತ್ತು ಅಪಾಯಕಾರಿ: ದೆಹಲಿಯ ಪಿಡಬ್ಲ್ಯೂಡಿ ಇಲಾಖೆ ಹೇಳಿಕೆ - Mahanayaka
1:07 AM Tuesday 27 - February 2024

ಪ್ರಧಾನಿ ಉದ್ಘಾಟಿಸಿದ್ದ ಸುರಂಗ ಮಾರ್ಗ ಅಸುರಕ್ಷಿತ ಮತ್ತು ಅಪಾಯಕಾರಿ: ದೆಹಲಿಯ ಪಿಡಬ್ಲ್ಯೂಡಿ ಇಲಾಖೆ ಹೇಳಿಕೆ

10/02/2024

2022 ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಒಂದೂವರೆ ಕಿಲೋಮೀಟರ್ ಉದ್ದದ ಸುರಂಗ ಮಾರ್ಗವು ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ದೆಹಲಿಯ ಪಿಡಬ್ಲ್ಯೂಡಿ ಇಲಾಖೆ ಹೇಳಿದ್ದು ಪ್ರಧಾನಿಯವರಿಗೆ ಭಾರಿ ಮುಖಭಂಗವಾಗಿದೆ. ಈ ಸುರಂಗ ಮಾರ್ಗಕ್ಕೆ 777 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು.

2023ರಲ್ಲಿ ಭಾರಿ ನೀರು ಈ ಸುರಂಗದೊಳಗೆ ತುಂಬಿಕೊಂಡಿತ್ತು ಮತ್ತು ಆ ಕಾರಣದಿಂದಾಗಿ ಹಲವು ಬಾರಿ ಸುರಂಗ ಮಾರ್ಗವನ್ನು ಮುಚ್ಚಲಾಗಿತ್ತು. ದೆಹಲಿಯಲ್ಲಿ ಮಳೆ ಬಂದಾಗಲೆಲ್ಲ ಈ ಸುರಂಗ ಮಾರ್ಗದಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಇದರಿಂದಾಗಿ ಈ ಸುರಂಗ ಮಾರ್ಗದಲ್ಲಿ ಸಾಕಷ್ಟು ಬಿರುಕುಗಳು ಉಂಟಾಗಿವೆ. ಇದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ಹೇಳುತ್ತಿದೆ. ಮಾತ್ರವಲ್ಲ, ಈ ಸುರಂಗ ಮಾರ್ಗದಲ್ಲಿ ವಾಹನಗಳು ಚಲಿಸುವುದು ಅಪಾಯ ಎಂದು ಹೇಳಲಾಗಿದೆ.

ಈ ಮೂಲಕ ಭಾರಿ ಪ್ರಚಾರದೊಂದಿಗೆ ಉದ್ಘಾಟನೆಗೊಂಡಿದ್ದ ಸುರಂಗ ಮಾರ್ಗ ಮುಚ್ಚುವ ಭೀತಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಸುರಂಗ ಮಾರ್ಗದ ಉದ್ಘಾಟನೆಯ ಜೊತೆಗೆ ಸಾಕಷ್ಟು ಪ್ರಚಾರವನ್ನು ಪಡಕೊಂಡಿದ್ದರು. ತನ್ನ ಸಾಧನೆಯಾಗಿ ಈ ಸುರಂಗ ಮಾರ್ಗವನ್ನು ಬಿಂಬಿಸಿದ್ದರು. ಇದೀಗ 777 ಕೋಟಿ ರೂಪಾಯಿ ನೀರಿನಲ್ಲಿಟ್ಟ ಹೋಮದಂತಾಗಿದೆ. ಮಾತ್ರ ಅಲ್ಲ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರಿ ಮುಜುಗರ ತಂದಿದೆ.

ಇತ್ತೀಚಿನ ಸುದ್ದಿ