ಕಾಡಿನಲ್ಲಿ ಪತ್ತೆಯಾಯಿತು ಮಕ್ಕಳ ಶವ: 200 ರಷ್ಟು ಮಕ್ಕಳ ಹತ್ಯೆ ಮಾಡಿದ ಖತರ್ನಾಕ್ ಕಿಲ್ಲರ್ ಅರೆಸ್ಟ್ - Mahanayaka

ಕಾಡಿನಲ್ಲಿ ಪತ್ತೆಯಾಯಿತು ಮಕ್ಕಳ ಶವ: 200 ರಷ್ಟು ಮಕ್ಕಳ ಹತ್ಯೆ ಮಾಡಿದ ಖತರ್ನಾಕ್ ಕಿಲ್ಲರ್ ಅರೆಸ್ಟ್

09/02/2024

ಸುಮಾರು 200 ಮಕ್ಕಳನ್ನು ಕೊಂದಿರುವ ಆರೋಪದಡಿಯಲ್ಲಿ ಸ್ವಯಂ ಘೋಷಿತ ಪಾದ್ರಿಯೊಬ್ಬನನ್ನು ಕೀನ್ಯಾದ ಮಲಿಂಡಿ ಎಂಬಲ್ಲಿ ಬಂಧಿಸಲಾಗಿದೆ.


Provided by

‘ಹಸಿವಿನಿಂದ ಆರಾಧನೆ’ ಎಂದು ಪ್ರತಿಪಾದಿಸುತ್ತಿದ್ದ ಸ್ವಯಂ ಘೋಷಿತ ಪಾದ್ರಿ ಪಾದ್ರಿ ಪಾಲ್ ನೆಥೆಂಗೆ ಮೆಕೆಂಜಿ ಮತ್ತು ಆತನ ಸುಮಾರು 29 ಮಂದಿ ಸಹಚರರು ಹಿಂದೂ ಮಹಾಸಾಗರದ ಸಮೀಪ ಇರುವ ಕಾಡಿನಲ್ಲಿ ಮೂರು ಶಿಶುಗಳು ಸೇರಿ ಸುಮಾರು 200 ಮಕ್ಕಳನ್ನು ಕೊಂದಿರುವುದಾಗಿ ಕೀನ್ಯಾದ ನ್ಯಾಯಾಲಯ ಆರೋಪಿಸಿದೆ.

ಪಾದ್ರಿ ಪಾಲ್ ವಿರುದ್ಧ ಭಯೋತ್ಪಾದನೆ, ನರಹತ್ಯೆ, ಮಕ್ಕಳ ಮೇಲೆ ಚಿತ್ರಹಿಂಸೆ ಮತ್ತು ಕ್ರೌರ್ಯದ ಆರೋಪ ಹೊರಿಸಲಾಗಿದೆ. ಈತ್ ‘ಯೇಸುವನ್ನು ಭೇಟಿಯಾಗಬಹುದು’ ಎಂದು ನಂಬಿಸಿ ನೂರಾರು ಮಕ್ಕಳನ್ನು ಹಸಿವಿನಿಂದ ಸಾಯುವಂತೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೆಕೆಂಜಿ ಮತ್ತು ಇತರ 29 ಶಂಕಿತರು ಮೂರು ಶಿಶುಗಳು ಸೇರಿದಂತೆ 191 ಕೊಲೆ ಪ್ರಕರಣಗಳಲ್ಲಿ ನಾವು ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ ಎನ್ನಲಾಗಿದೆ.
31ನೇ ಶಂಕಿತ ಆರೋಪಿಗೆ ಮಾನಸಿಕ ಸಾಮರ್ಥ್ಯದ ಕೊರತೆ ಇದ್ದ ಕಾರಣ ಒಂದು ತಿಂಗಳ ಅವಧಿಯಲ್ಲಿ ಮಾಲಿಂಡಿ ಹೈಕೋರ್ಟ್‌ಗೆ ಹಾಜರಾಗಲು ಆದೇಶಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಶಕಹೊಲ ಅರಣ್ಯದಲ್ಲಿ ಶವಗಳು ಪತ್ತೆಯಾದ ಬಳಿಕ ನಂತರ ಮೆಕೆಂಜಿ ಮತ್ತು ಆತನ ಸಹಚರರನ್ನು ಬಂಧಿಸಲಾಯಿತು. ಶಾಕಾಹೊಲ ಅರಣ್ಯ ಹತ್ಯಾಕಾಂಡದ ಶವ ಪರೀಕ್ಷೆಯಲ್ಲಿ 429 ಕ್ಕೂ ಹೆಚ್ಚು ಮಂದಿ ಹಸಿವಿನಿಂದ ಸಾವನ್ನಪ್ಪಿದ್ದಾರೆ. ಮಕ್ಕಳು ಸೇರಿದಂತೆ ಇತರ ಕೆಲವರನ್ನು ಕತ್ತು ಹಿಸುಕಿ, ಹೊಡೆದು ಅಥವಾ ಉಸಿರುಗಟ್ಟಿಸಿ ಕೊಳ್ಳಲಾಗಿತ್ತು ಎಂಬ ಮಾಹಿತಿ‌ ಸಿಕ್ಕಿದೆ.

ಇತ್ತೀಚಿನ ಸುದ್ದಿ