ಕಹಳೆ: ರೈತರಿಂದ ಟ್ರಾಕ್ಟರ್ ಮೆರವಣಿಗೆ ಮೂಲಕ ಪ್ರತಿಭಟನೆ; ಎಂಎಸ್ಪಿಗೆ ಬೇಡಿಕೆ

ಹರಿಯಾಣದ ಕರ್ನಾಲ್‌ನಲ್ಲಿ ರೈತರು ಟ್ರಾಕ್ಟರ್ ಮೆರವಣಿಗೆ ನಡೆಸಿದ್ದಾರೆ. ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಕಾನೂನು ಖಾತರಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಗಣರಾಜ್ಯೋತ್ಸವದಂದು ಕೇಂದ್ರದ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರೈತರ ಒಕ್ಕೂಟವು ನೀಡಿದ ರಾಷ್ಟ್ರವ್ಯಾಪಿ ಕರೆಯ ಭಾಗವಾಗಿ ಈ ಮೆರವಣಿಗೆ ನಡೆಯುತ್ತಿದೆ.
ಜನವರಿ 8 ರಂದು ಎಸ್ಕೆಎಂ ರಾಷ್ಟ್ರವ್ಯಾಪಿ ಮೆರವಣಿಗೆಗೆ ಕರೆ ನೀಡಿತ್ತು. ನೂರಾರು ಟ್ರಾಕ್ಟರುಗಳು ಬೀದಿಗಿಳಿಯಲಿವೆ ಎಂದು ಹೇಳಿತ್ತು.
ಫೆಬ್ರವರಿ 13, 2024 ರಿಂದ, ಎಸ್ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಅಡಿಯಲ್ಲಿ ರೈತರು ಖನೌರಿಯ ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಇತರ ಬೇಡಿಕೆಗಳಲ್ಲಿ ಸಾಲ ಮನ್ನಾ, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ಮತ್ತು 2021 ರ ಲಖಿಂಪುರ್ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕೊಡಬೇಕೆಂಬ ಆಗ್ರಹ ಕೂಡಾ ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj