ಮಗಳ ಬರ್ತ್ ಡೇ ಕಾರ್ಯಕ್ರಮದಲ್ಲಿ ಕ್ಯಾಮರಾ ಮ್ಯಾನ್ ನನ್ನು ಗುಂಡಿಟ್ಟು ಕೊಂದ ತಂದೆ! - Mahanayaka

ಮಗಳ ಬರ್ತ್ ಡೇ ಕಾರ್ಯಕ್ರಮದಲ್ಲಿ ಕ್ಯಾಮರಾ ಮ್ಯಾನ್ ನನ್ನು ಗುಂಡಿಟ್ಟು ಕೊಂದ ತಂದೆ!

newdehil
01/03/2024

ಕ್ಯಾಮೆರಾ ಬ್ಯಾಟರಿ ಖಾಲಿಯಾಗಿದೆ ಎನ್ನುವ ಕ್ಷುಲಕ ಕಾರಣಕ್ಕೆ ವಿಡಿಯೋಗ್ರಾಫರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ದರ್ಬಾಂಗ ಜಿಲ್ಲೆಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಖ್ನಾಹಾ ಗ್ರಾಮದಲ್ಲಿ ನಡೆದಿದೆ.

22 ವರ್ಷದ ವೀಡಿಯೋಗ್ರಾಫರ್ ಸುಶೀಲ್ ಕುಮಾರ್ ಸಾಹ್ನಿ ಹತ್ಯೆಗೀಡಾದ ಯುವಕನಾಗಿದ್ದಾನೆ. ಆರೋಪಿ ರಾಕೇಶ್ ಸಾಹ್ನಿ ಆತನ ಮಗಳ ಹುಟ್ಟುಹಬ್ಬದ ಪಾರ್ಟಿಗೆ ವಿಡಿಯೋ ರೆಕಾರ್ಡ್ ಮಾಡಲು ಸುಶೀಲ್ ಕುಮಾರ್ ಗೆ ತಿಳಿಸಿದ್ದ. ಆದರಂತೆ ಪಾರ್ಟಿಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವೇಳೆ ಕ್ಯಾಮರಾದ ಬ್ಯಾಟರಿ ಖಾಲಿಯಾಗಿದೆ. ಈ ವಿಚಾರ ತಿಳಿದು ಕೋಪಗೊಂಡ ರಾಕೇಶ್, ಕ್ಯಾಮರಾ ಮ್ಯಾನ್ ಗೆ ಅವಾಚ್ಯ ಶಬ್ದಗಳಿಂದ ಬೈದು ಗುಂಡು ಹಾರಿಸಿದ್ದಾನೆ.

ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಶೀಲ್ ಕುಮಾರ್ ನನ್ನು ಆರೋಪಿ ಹಾಗೂ ಆತನ ಸಹಚರರು ದರ್ಭಾಂಗಾ ಆಸ್ಪತ್ರೆಗೆ ಸಾಗಿಸಿ, ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಆಸ್ಪತ್ರೆಯ ಮುಂದೆ ಸುಶೀಲ್ ದಾರುಣವಾಗಿ ಸಾವನ್ನಪ್ಪಿದ್ದಾನೆ.

ವೀಡಿಯೋಗ್ರಾಫರ್ ನ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ರಾಕೇಶ್ ನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಗುರುವಾರ ಬೆಳಗ್ಗೆ ಲಹೇರಿಯಾಸ ರೈ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ತಡೆದು ರಸ್ತೆಗಿಳಿದು ಪ್ರತಿಭಟಿಸಿದರು.

ಹಲವಾರು ಗಂಟೆಗಳ ಕಾಲ ರಸ್ತೆ ತಡೆ ಮುಂದುವರಿದಿದ್ದು, ಕೂಡಲೇ ಬೇನಿಪುರ ಎಸ್ ಡಿಪಿಒ ಸುಮಿತ್ ಕುಮಾರ್ ಮಧ್ಯಪ್ರವೇಶಿಸಿ, ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ