'ನಮ್ಮೊಂದಿಗೆ ಪ್ರೇಮ, ಮದುವೆಯಾದದ್ದು ಮೋದಿಯನ್ನ': ಹೆಚ್.ಡಿ.ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ - Mahanayaka

‘ನಮ್ಮೊಂದಿಗೆ ಪ್ರೇಮ, ಮದುವೆಯಾದದ್ದು ಮೋದಿಯನ್ನ’: ಹೆಚ್.ಡಿ.ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

kharge modi devegowda
18/03/2026

ದೆಹಲಿ: ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ವಿರುದ್ಧ ಹಾಸ್ಯ ಚಟಾಕಿಯೊಂದಿಗೆ ವಾಗ್ದಾಳಿ ನಡೆಸಿದರು.

ದೇವೇಗೌಡರ ಜೊತೆಗಿನ ತಮ್ಮ 54 ವರ್ಷಗಳ ಸುದೀರ್ಘ ಸಂಬಂಧವನ್ನು ಸ್ಮರಿಸಿದ ಖರ್ಗೆ, “ನಾನು ಮತ್ತು ದೇವೇಗೌಡರು ದಶಕಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದರೆ ಇತ್ತೀಚೆಗೆ ಏನಾಯಿತೋ ತಿಳಿಯದು” ಎಂದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ವ್ಯಂಗ್ಯವಾಡಿದ ಖರ್ಗೆ, “ಗೌಡರು ನಮ್ಮೊಂದಿಗೆ ಪ್ರೇಮ (Love) ಮಾಡಿದರು, ಆದರೆ ಕೊನೆಗೆ ಮದುವೆಯಾದದ್ದು (Marriage) ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನ” ಎಂದು ಹೇಳುವ ಮೂಲಕ ಸದನದಲ್ಲಿ ನಗೆಹೊನಲು ಹರಿಸಿದರು.

ಗೌಡರು ಸಿದ್ಧಾಂತಗಳನ್ನು ಬದಿಗಿಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿರುವುದನ್ನು ಖರ್ಗೆ ಈ ಹಾಸ್ಯಭರಿತ ಮಾತಿನ ಮೂಲಕ ಟೀಕಿಸಿದರು.

ಈ ಸಂದರ್ಭದಲ್ಲಿ ಸದನದಲ್ಲಿದ್ದ ಇತರ ಸದಸ್ಯರು ಖರ್ಗೆ ಅವರ ಮಾತಿಗೆ ನಕ್ಕರೆ, ದೇವೇಗೌಡರು ಕೂಡ ಮುಗುಳ್ನಗುತ್ತಲೇ ಪ್ರತಿಕ್ರಿಯಿಸಿದರು. ಮೈತ್ರಿ ರಾಜಕಾರಣದ ಇಂದಿನ ಸ್ಥಿತಿಯನ್ನು ಖರ್ಗೆ ಅವರು ಅತ್ಯಂತ ಮಾರ್ಮಿಕವಾಗಿ ವಿವರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ