ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾರ್ಥದ ಹೋರಾಟ: ನಟ ಚೇತನ್
ಚಾಮರಾಜನಗರ: ಖಾಸಗಿ ವಲಯದಲ್ಲಿ ಮೀಸಲಾತಿ ಬಹಳ ಅವಶ್ಯಕವಾಗಿದೆ ಎಂದು ಚಿತ್ರನಟ ಚೇತನ್ ಅಹಿಂಸಾ ಹೇಳಿದರು
ನಗರದ ಜೆ.ಹೆಚ್.ಪಟೇಲ್ ಸಭಾಂಗಣ ಬಹುಜನ್ ವಾಲೆಂಟಿಯರ್ ಫೋರ್ಸ್ — ಬಿವಿಎಫ್ ಜಿಲ್ಲಾ ಘಟಕದ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮೀಸಲಾತಿ ಪ್ರಾತಿನಿಧ್ಯವೋ- ಆರ್ಥಿಕ ಸಬಲೀಕರಣವೋ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀಸಲಾತಿ ಪ್ರಾಧ್ಯಾನ್ಯತೆ ಅಷ್ಟೆಯಲ್ಲದೇ ಅದೊಂದು ನ್ಯಾಯ ಮೀಸಲಾತಿ ಪ್ರಾತಿನಿಧ್ಯವೋ- ಆರ್ಥಿಕ ಸಬಲೀಕರಣವೋ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕಾದರೆ ಮೀಸಲಾತಿ ಪ್ರಾತಿನಿಧ್ಯವೇ ಹೊರತು ಆರ್ಥಿಕ ಸಬಲೀಕರಣವಲ್ಲವೇ ಅಲ್ಲ. ನಮಗೆ ಮೀಸಲಾತಿ ಎಂದರೆ ಪ್ರತಿಯೊಂದು ಸಮುದಾಯಕ್ಕೂ ಆಯಾಯ ಸಮುದಾಯ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳನ್ನು ಶಿಕ್ಷಣ, ಉದ್ಯೋಗ, ರಾಜಕೀಯ, ಭೌಗೋಳಿಕವಾಗಿ ಈ ನಿಟ್ಟಿನಲ್ಲಿ ಪ್ರಾಧ್ಯಾನ್ಯತೆ ಕೊಡುವ ಒಂದು ಪ್ರಯತ್ನ. ಮೀಸಲಾತಿ ಪ್ರಾಧ್ಯಾನ್ಯತೆ ಅಷ್ಠೆಯಲ್ಲದೇ ಅದೊಂದು ನ್ಯಾಯ ಎಂದರು.
ಚಾಮರಾಜನಗರಕ್ಕೆ ಬರಲು ಯಾವಾಗಲೂ ಖುಷಿ: ಚಾಮರಾಜನಗರ ಬರಲು ಯಾವಾಗಲು ಖುಷಿಯಾಗುತ್ತದೆ. ಅಮೇರಿಕಾದಿಂದ ಬಂದ ಮೇಲೆ ಚಾಮರಾಜನಗರದಿಂದ ನಮ್ಮ ಸಮಾಜಸೇವಾ ಶುರುವಾಗಿದೆ. ಗುಂಡ್ಲುಪೇಟೆ, ಚಾಮರಾಜನಗರದಲ್ಲಿ ರಂಗಭೂಮಿ ಮೂಖಾಂತರ ಪರಿವರ್ತನೆಯಾಗಬೇಕು ಎಂದು ಕೆಲಸ ಮಾಡಿ ಅನುಭವಪಟ್ಟ ನಂತರ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಆನಂತರ ನಿಮ್ಮ ಜೊತೆ ಮಾತನಾಡಲು ಅವಕಾಶ ಸಿಕ್ಕಿರುವುದು ಬಹಳ ಸಂತೋಷವಾಗಿದೆ ಎಂದರು.
ರಾಜ್ಯ ಸರ್ಕಾರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಶ್ರೀಗಳ ಹೋರಾಟ ಹಾಗೂ ನಾಗಮೋಹನ್ ದಾಸ್ ವರದಿ ಪ್ರಕಾರ ಎಸ್ ಟಿಗೆ ಶೇ.೩ ರಿಂದ ಶೇ.7ಕ್ಕೆ ಎಸ್ ಸಿಗೆ ಶೇ. 15ರಿಂದ 17 ಕ್ಕೆ ಮೀಸಲಾತಿ ಹೆಚ್ಚು ಮಾಡಿದೆ ಇದೊಂದು ಒಳ್ಳೆಯ ನಿರ್ಧಾರವಾಗಿದೆ ಎಂದರು.
ಒಳ ಮೀಸಲಾತಿ ನ್ಯಾಯು ಬೇಡಿಕೆ: ಒಕ್ಕಲಿಗ ಸಮುದಾಯ ಶೇ.4 ರಿಂದ 12ರವಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡುವುದು ಸಮಂಜಸವಾಗಿದೆ. ಪಂಚಮಸಾಲಿ ಸಮುದಾಯ 3ಬಿ ಯಿಂದ 2ಎಗೆ ಸೇರಿಸಬೇಕು ಎಂದು ಹೋರಾಟ ಮಾಡುವುದು ಸ್ವಾರ್ಥದ ಹೋರಾಟವಾಗಿದೆ. ನ್ಯಾ.ಸದಾಶಿವ ಆಯೋಗದ ಪ್ರಕಾರ ಒಳಮೀಸಲಾತಿ ನ್ಯಾಯಯುತ ಬೇಡಿಕೆಯಾಗಿದೆ ಸರೋಜಿನಿ ಮಹಿಷಿ ವರದಿ ಆಧಾರಿತವಾಗಿ ಕರ್ನಾಟಕದಲ್ಲಿ ಕನ್ನಡಗರಿಗೆ ಉದ್ಯೋಗಾವಕಾಶ ನೀಡಬೇಕು. ಶಿಕ್ಷಣ, ಉದ್ಯೋಗ ಮೀಸಲಾತಿಯಲ್ಲಿ ನಮಗೆ ನ್ಯಾಯ ಸಂಪೂರ್ಣ ಪ್ರಾಧ್ಯನ್ಯತೆ ಸಿಗುವ ತನಕ ಬದಲಾಯಿಸಬಾರದು. ಜನಸಂಖ್ಯೆಗೆ ಆಧಾರವಾಗಿ ಮೀಸಲಾತಿ ಕೊಡುವುದು ನ್ಯಾಯವಾಗಿದೆ ಎಂದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಚುನಾವಣೆಗಳಲ್ಲಿ ಹಣಕ್ಕಾಗಿ ಮತ ಮಾರಾಟ ಮಾಡುವುದನ್ನು ಬಿಡುವ ತನಕ ಸಮಾನತೆ ಕಾಣಲು ಸಾಧ್ಯವಿಲ್ಲ. ಸಮಾಜಸೇವೆ ಮಾಡುವಂತಹ ವ್ಯಕ್ತಿಗಳ ಗುರುತಿಸಿ ಚುನಾವಣೆಗಳಲ್ಲಿ ಆಯ್ಕೆ ಮಾಡಿದರೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಮೂಲಕ ನೀಡಿರುವ ಮೀಸಲಾತಿ, ಸಮಾನತೆಗೆ ಒಂದು ಅರ್ಥ ಬರುತ್ತದೆ, ಸಾರ್ಥಕವಾಗುತ್ತದೆ ಅ ಮೂಲಕ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬಹುದಾಗಿದೆ ಎಂದರು.
ಕರ್ನಾಟಕ ಬೌದ್ದ ಸಮಾಜ ರಾಜ್ಯಾಧ್ಯಕ್ಷ ಹ.ರಾ.ಮಹೇಶ್ ಮೀಸಲಾತಿ ಕುರಿತು ಮಾತನಾಡಿ, ಮೀಸಲಾತಿ ಭಿಕ್ಷೆಯಲ್ಲಿ ಅದು ಸಂವಿಧಾನಬದ್ದವಾಗಿ ನಮಗೆ ನೀಡಿರುವ ಹಕ್ಕಾಗಿದೆ. ಯಾವುದೇ ಹೋರಾಟ ಉಪವಾಸ ಮಾಡದೇ ಇರುವ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಶೋಪಿತ ಸಮುದಾಯಗಳಿಗೆ ಮೀಸಲಾತಿ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತವೆ ಎಂದು ಆರೋಪಿಸಿದರು.
ತಿ.ನರಸೀಪುರದ ನಳಂದ ಬುದ್ದವಿಹಾರ ಬೋಧಿರತ್ನ ಬಂತೇಜಿ ದಿವ್ಯ ಸಾನಿಧ್ಯ ಮಾತನಾಡಿ, ತುಳಿತಕ್ಕೊಳಗಾದವರಿಗೆ ಮೇಲು ಬರಲು ಆದ್ಯತೆ ನೀಡುವುದು ನೆನ್ನೆ, ಮೊನ್ನೆದಲ್ಲ ಬುದ್ದನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. ಪ್ರಸ್ತುತ ದಿನಗಳಲ್ಲಿ ಯತಾಸ್ಥಿತಿ ವಾದವನ್ನು ಒಪ್ಪಿಕೊಳ್ಳುವವರನ್ನು, ಸುಳ್ಳು ಹೇಳುವವರನ್ನು ರಾಷ್ಟ್ರನಾಯಕರನ್ನಾಗಿ ಮಾಡುತ್ತಾರೆ. ಸರ್ಕಾರಿ ಸೌಮ್ಯದ ರೈಲ್ವೆ, ಬಿಎಸ್ ಎನ್ ಎಲ್ ಇತರ ಸಂಸ್ಥೆಗಳ ನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಠಗಳಿಗೆ ಮೀಸಲಾತಿ ಕೊಟ್ಟು ಅ ಮೂಲಕ ವಿದ್ಯಾರ್ಥಿಗಳಿಗೆ ಶೀಟು ಕೊಡಿಸುವ ಕೆಲಸ ಆಗಬಹುದು ಎಂದರು.
ಬಿವಿಎಫ್ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಎಸ್ ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ಕಮಲ್, ನಗರಸಭಾ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ಎಂ.ಮಹೇಶ್, ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್, ಬಿವಿಎಫ್ ಜಿಲ್ಲಾ ಸಂಯೋಜಕರಾದ ಎಂ.ರವಿಮೌರ್ಯ, ಆಶ್ರೀತ್, ತಾಲೂಕು ಸಂಯೋಜಕರಾದ ಮಹೇಶ್, ಯೋಗೇಶ್, ನಾಗಮಲ್ಲು, ಸುನೀಲ್, ಜೆ.ಶಿವಕುಮಾರ್, ಅಧ್ಯಕ್ಷರಾದ ಮನೋಜ್, ನಂಜುಂಡಸ್ವಾಮಿ, ಪ್ರಸನ್ನ, ಮನೋಜ್, ಅಜಿತ್ ಮೌರ್ಯ, ಯ.ನಾಗರಾಜು ಇತರರು ಹಾಜರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka