ವಯನಾಡ್ ಭೂಕುಸಿತ: ಸಂತ್ರಸ್ತರಿಗೆ ಹೊಸ ಮನೆಗಳನ್ನು ಪಡೆಯಲು ಅವಕಾಶ; ತ್ವರಿತ ವಿಮಾ ಕ್ಲೈಮ್ ಇತ್ಯರ್ಥ - Mahanayaka
9:56 AM Thursday 7 - November 2024

ವಯನಾಡ್ ಭೂಕುಸಿತ: ಸಂತ್ರಸ್ತರಿಗೆ ಹೊಸ ಮನೆಗಳನ್ನು ಪಡೆಯಲು ಅವಕಾಶ; ತ್ವರಿತ ವಿಮಾ ಕ್ಲೈಮ್ ಇತ್ಯರ್ಥ

04/08/2024

ವಯನಾಡ್ ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಬಾಧಿತರಾದವರಿಗೆ ಕೇರಳ ಸರ್ಕಾರವು ಸಮಗ್ರ ಪುನರ್ ವಸತಿ ಯೋಜನೆಯನ್ನು ಘೋಷಿಸಿದೆ. ವಯನಾಡ್ ಜಿಲ್ಲೆಯ ಮುಂಡಕ್ಕೈ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಸ್ಥಳಾಂತರಗೊಂಡವರಿಗೆ ವಸತಿ ಒದಗಿಸಲು ಸುರಕ್ಷಿತ ಪ್ರದೇಶದಲ್ಲಿ ಹೊಸ ಟೌನ್‌ ಶಿಪ್ ಸ್ಥಾಪಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಪುನರ್ ವಸತಿ ಪ್ರಕ್ರಿಯೆಯ ವಿವರಗಳನ್ನು ವಿವರಿಸಿದರು. ಅದನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಒತ್ತಿ ಹೇಳಿದರು. ಸಂತ್ರಸ್ತರಿಗೆ ಭೂಮಿ ಒದಗಿಸಲು ಮತ್ತು ಮನೆಗಳನ್ನು ನಿರ್ಮಿಸಲು ಜಾಗತಿಕ ಸಮುದಾಯದಿಂದ ವಿವಿಧ ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಈ ಪ್ರಯತ್ನಗಳನ್ನು ಸಮನ್ವಯಗೊಳಿಸಲು, ಜಂಟಿ ಭೂ ಕಂದಾಯ ಆಯುಕ್ತೆ ಎ. ಗೀತಾ ಐಎಎಸ್ ಅವರ ನೇತೃತ್ವದಲ್ಲಿ ‘ವಯನಾಡ್ ಗೆ ಸಹಾಯ’ ಕೋಶವನ್ನು ರಚಿಸಲಾಗಿದೆ ಎಂದರು.

ಪೀಡಿತ ಕುಟುಂಬಗಳ ತ್ವರಿತ ಪುನರ್ ವಸತಿಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ. ಅವರ ಜೀವನ ಮತ್ತು ಸಮುದಾಯಗಳನ್ನು ಪುನರ್ ನಿರ್ಮಿಸಲು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಬೆಂಬಲವನ್ನು ಬಳಸಿಕೊಳ್ಳುತ್ತಾರೆ. “ಬದುಕುಳಿದವರಿಗೆ ಸಮಗ್ರ ಪುನರ್ವಸತಿ ಪ್ರಕ್ರಿಯೆಯನ್ನು ಸರ್ಕಾರ ಯೋಜಿಸಿದೆ. ತ್ವರಿತವಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಟೌನ್ ಶಿಪ್ ನಿರ್ಮಿಸಲು ಹೊಸ, ಸುರಕ್ಷಿತ ಪ್ರದೇಶವನ್ನು ಗುರುತಿಸಲಾಗುವುದು. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಸಚಿವರು ವಯನಾಡ್ ಗೆ ಭೇಟಿ ನೀಡಲಿದ್ದಾರೆ” ಎಂದು ಪಿಣರಾಯಿ ವಿಜಯನ್ ಸುದ್ದಿಗಾರರಿಗೆ ತಿಳಿಸಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ