ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ: 'ಶೂಟರ್ ಗಳು ಹೆದರಿಸಲು ಬಯಸಿದ್ದರು, ಕೊಲ್ಲಲು ಅಲ್ಲ' ಎಂದ ಪೊಲೀಸರು - Mahanayaka
10:03 PM Saturday 23 - August 2025

ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ: ‘ಶೂಟರ್ ಗಳು ಹೆದರಿಸಲು ಬಯಸಿದ್ದರು, ಕೊಲ್ಲಲು ಅಲ್ಲ’ ಎಂದ ಪೊಲೀಸರು

18/04/2024


Provided by

ಮುಂಬೈ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಬಂದೂಕುಧಾರಿಗಳು ನಟನನ್ನು ಕೊಲ್ಲುವ ಬದಲು ಬೆದರಿಸುವ ಉದ್ದೇಶವನ್ನು ಹೊಂದಿದ್ದರು ಎಂದು ಮುಂಬೈ ಅಪರಾಧ ವಿಭಾಗ ಬಹಿರಂಗಪಡಿಸಿದೆ.

ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರ ಪ್ರಕಾರ, ದುಷ್ಕರ್ಮಿಗಳು ಪನ್ವೇಲ್ ನಲ್ಲಿರುವ ಖಾನ್ ಅವರ ತೋಟದ ಮನೆಯನ್ನು ಮೇಲೆ ಮೊದಲೇ ಟಾರ್ಗೆಟ್ ಮಾಡಿದ್ದರು ಮತ್ತು ಮಾರಣಾಂತಿಕ ದಾಳಿ ನಡೆಸುವ ಬದಲು ಭಯವನ್ನು ಹುಟ್ಟುಹಾಕಲು ಪ್ರಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗವು ಪ್ರಸ್ತುತ ಹರಿಯಾಣ ಮತ್ತು ಇತರ ರಾಜ್ಯಗಳ ಸುಮಾರು ಏಳು ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ