ಪಿಕಪ್ ವ್ಯಾನ್ ಡಿವೈಡರ್ ಗೆ ಡಿಕ್ಕಿ: ಮೂವರು ಮಕ್ಕಳು ಸೇರಿ ಐವರು ಸಾವು
ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಪಿಕ್-ಅಪ್ ವ್ಯಾನ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.
ಆದಿಲಾಬಾದ್ ನ ಗುಡಿಹತ್ನೂರ್ ಮಂಡಲದ ಮೇಕಲಗಂಡಿ ಕಾರ್ನರ್ ಬಳಿ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ನಡೆದಿದೆ. ಎಂಟು ಜನರನ್ನು ಹೊತ್ತ ವಾಹನವು ನಿರ್ಮಲ್ ಜಿಲ್ಲೆಯ ಭೈನ್ಸಾದಿಂದ ಅದಿಲಾಬಾದ್ಗೆ ಪ್ರಯಾಣಿಸುತ್ತಿದ್ದಾಗ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಮೃತರಲ್ಲಿ ಮೊಯಿಜ್ (60), ಅಲಿ (8), ಖಾಜಾ ಮೊಯ್ನುದ್ದೀನ್ (40), ಮೊಹಮ್ಮದ್ ಉಸ್ಮಾನುದ್ದೀನ್ (11) ಮತ್ತು ಫರೀದ್ (12) ಸೇರಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ನಂತರ ಫರೀದ್ ಸಾವನ್ನಪ್ಪಿದ್ದು, ಇತರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth