ಮಾಜಿ ಮುಖ್ಯಮಂತ್ರಿ ಹೃದಯಾಘಾತದಿಂದ ನಿಧನ: ಗಣ್ಯರಿಂದ ಸಂತಾಪ - Mahanayaka

ಮಾಜಿ ಮುಖ್ಯಮಂತ್ರಿ ಹೃದಯಾಘಾತದಿಂದ ನಿಧನ: ಗಣ್ಯರಿಂದ ಸಂತಾಪ

29/10/2020

ಗಾಂಧಿನಗರ: ಗುಜರಾತ್ ನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಹೃದಯಾಘಾತದಿಂದ ನಿಧನ ಹೊಂದಿದ್ದು, 91 ವರ್ಷಗಳ ತಮ್ಮ ಜೀವನ ಪ್ರಯಾಣವನ್ನು ಇಂದು ನಿಲ್ಲಿಸಿ, ತಮ್ಮ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.Provided by

ಎರಡು ಬಾರಿ ಗುಜರಾತ್ ನ ಸಿಎಂ ಹುದ್ದೆಯನ್ನು ಅಲಂಕರಿಸಿದ್ದ ಕೇಶುಭಾಯ್ ಪಟೇಲ್, ಸೆಪ್ಟೆಂಬರ್ 30 ರಂದು ಕೂಡ ಸೋಮನಾಥ ಮಂದಿರ ಟ್ರಸ್ಟ್‌ ಅಧ್ಯಕ್ಷರಾಗಿ ಎರಡನೇ ಬಾರಿಗೆ ಚುನಾಯಿತರಾಗಿದ್ದರು.


ಜುಲೈ 24, 1930 ರಂದು ಜನಿಸಿದ್ದ ಕೇಶುಭಾಯ್ ಪಟೇಲ್, ಮಾರ್ಚ್ 1995 ರಿಂದ 1995 ರ ಅಕ್ಟೋಬರ್ ವರೆಗೆ ಮೊದಲ ಅವಧಿಗೆ ನಂತರ ಮಾರ್ಚ್ 1998 ರಿಂದ ಅಕ್ಟೋಬರ್ 2001 ರವರೆಗೆ ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.


ಇತ್ತೀಚಿನ ಸುದ್ದಿ