ಸರ್ಕಾರಿ ನೌಕರಿ ಪಡೆಯಲು ಇಚ್ಛೆಸುವವರಿಗೆ ಸಿಹಿ ಸುದ್ದಿ! ಸರ್ಕಾರದಿಂದಲೇ ಉಚಿತ ತರಬೇತಿ | ಬೇಗ ಅರ್ಜಿ ಸಲ್ಲಿಸಿ

Free Coaching Scheme by Karnataka Government 2025 — ಸರ್ಕಾರಿ ಉದ್ಯೋಗ ಪಡೆಯಲು, ಇರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲು ಕರ್ನಾಟಕ ರಾಜ್ಯಾ ಸರ್ಕಾರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿಶೇಷವೇನೆಂದರೆ ಉಚಿತ ತರಬೇತಿ ಜೊತೆಗೆ ನಿಮಗೆ ಮಾಸಿಕ ಖರ್ಚಿಗೆ ಹಣವನ್ನು ನೀಡಲಾಗುತ್ತದೆ. ಇಂತಹ ಒಂದು ಉತ್ತಮ ಯೋಜನೆಯ ಬಗ್ಗೆ ನಿಮಗೆ ತಿಳಿಸಳಿದ್ದೇವೆ.
ಯೋಜನೆಯ ಮಾಹಿತಿ :
ಸಮಾಜ ಕಲ್ಯಾಣ ಇಲಾಖೆಯಿಂದ ಪ. ಜಾತಿ ಹಾಗೂ ಪ. ಪಂಗಡ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ KAS ಪರೀಕ್ಷೆ ಸೇರಿದಂತೆ SSC, ಬ್ಯಾಂಕಿಂಗ್ , ರೈಲ್ವೆ, ನ್ಯಾಯಾಂಗ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತದೆ.
ಉಚಿತ ತರಬೇತಿಗೆ ಅಭ್ಯರ್ಥಿಗಳಿಗೆ ಮೊದಲು ಸಾಮಾನ್ಯ ಪರೀಕ್ಷೆ ನಡೆಸಿ, ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.
ಅದೇ ರೀತಿ ಇದರ ಜೊತೆಗೆ ಮಾಸಿಕ 5,000 ರೂಪಾಯಿ ಆರ್ಥಿಕ ಸಹಾಯ ಕೂಡ ಮಾಡಲಾಗುತ್ತದೆ.
ಯಾವೆಲ್ಲಾ ಅಭ್ಯರ್ಥಿಗಳು ಈ ಉಚಿತ ಕೋಚಿಂಗ್ ಯೋಜನೆಗೆ ಅರ್ಜಿ ಸಲ್ಲಿಸಬಹುದು?
ಪ್ರಮುಖವಾಗಿ 21 ರಿಂದ 37 ವರ್ಷದ ಒಳಗಿನ SC & ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಾಗಿರಬೇಕು ಮತ್ತು ಈ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 5 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು.
ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ — 20ನೇ ಫೆಬ್ರವರಿ 2025:
ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ — https://swdservices.karnataka.gov.in/IGCCD
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: