ಕರಾವಳಿ ರಕ್ಷಣಾ ಪಡೆಯಲ್ಲಿ 10th & 12th ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗವಕಾಶ

Indian Coast Guard Recruitment 2025 — ಕರಾವಳಿ ಪಡೆಯು ಕೇಂದ್ರ ರಕ್ಷಣಾ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯು ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿದ್ದು, ದೇಶ ಸೇವೆ ಸಲ್ಲಿಸಲು ಇಚ್ಛೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸುವರ್ಣಅವಕಾಶವನ್ನು ಉಪಯೋಗಿಸಿಕೊಳ್ಳಿ.
ನೇಮಕಾತಿ ಹುದ್ದೆಗಳ ವಿವರ :
ಭಾರತೀಯ ಕರಾವಳಿ ಪಡೆಯಲ್ಲಿ ಒಟ್ಟು 300 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇವುಗಳಲ್ಲಿ ವಿವಿಧ ವಿಭಾಗದ ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ.
* ನಾವಿಕ್ ಜನರಲ್ ಡ್ಯೂಟಿ — 260 ಹುದ್ದೆಗಳು
* ನಾವಿಕ್ ಡೋಮೆಸ್ಟಿಕ್ ಬ್ರಾಂಚ್ — 40 ಹುದ್ದೆಗಳು
ಯಾವ ಅರ್ಹತೆಗಳನ್ನು ಹೊಂದಿರಬೇಕು?
ಈ ನೇಮಕಾತಿಯ ನಾವಿಕ್ ಜನರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10th ಪಾಸಾಗಿರಬೇಕು ಹಾಗೂ ನಾವಿಕ್ ಡೋಮೆಸ್ಟಿಕ್ ಬ್ರಾಂಚ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 12th ಪಾಸಾಗಿರಬೇಕು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 01 ಸೆಪ್ಟೆಂಬರ್ 2003 ರಿಂದ 31 ಆಗಸ್ಟ್ 2007 ರ ನಡುವೆ ಜನಿಸಿರಬೇಕು. ಮೀಸಲಾತಿ ವರ್ಗದವರಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಸಂಬಳ : ಮಾಸಿಕ 21,700ರೂ. ಮೂಲ ವೇತನದ ಜೊತೆಗೆ ಇತರೆ ಸೌಲಭ್ಯಗಳು ಇರಲಿವೆ.
ಅರ್ಜಿ ಶುಲ್ಕ ಎಷ್ಟು?
SC, ST ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ, ಆದ್ದರಿಂದ ಇವರು ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಉಳಿದ ವರ್ಗದ ಅಭ್ಯರ್ಥಿಗಳು 300ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಮುಖ್ಯ ದಿನಾಂಕಗಳು : ಫೆಬ್ರವರಿ 11 ರಿಂದ ಫೆಬ್ರವರಿ 25 ರವರೆಗೆ.
ಅರ್ಜಿ ಸಲ್ಲಿಸಲು ಲಿಂಕ್ — https://joinindiancoastguard.cdac.in/
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: