10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ: ಅಧಿಸೂಚನೆ ಬಿಡುಗಡೆ

Post Office Jobs 2025 — ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದಾರೆ.
ಭಾರತ ದೇಶಾದ್ಯಂತ ವಿವಿಧ ವಲಯಗಳಲ್ಲಿ ಒಟ್ಟು 25 ಹುದ್ದೆಗಳು ಖಾಲಿ ಇವೆ. ಯಾವ ವಲಯಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಅರ್ಜಿ ಸಲ್ಲಿಕೆಗೆ ಬೇಕಾಗಿರುವ ವಿವಿಧ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
Staff Car Driver Recruitment at Post Department 2025 :
ಒಟ್ಟು 25 ಹುದ್ದೆಗಳು ಖಾಲಿ ಇದ್ದು, ವಲಯವಾರು ಖಾಲಿ ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ.
* ಸೆಂಟ್ರಲ್ ರಿಜನ್ – 01 ಹುದ್ದೆ
* ಚೆನ್ನೈ – 15 ಹುದ್ದೆಗಳು
* ದಕ್ಷಿಣ ವಲಯ – 04 ಹುದ್ದೆಗಳು
* ಪಶ್ಚಿಮ ವಲಯ – 05 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :
ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಪ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು. ಲಘು ಮತ್ತು ಭಾರಿ ವಾಹನ ಪರವಾನಗಿ ಹೊಂದಿರಬೇಕು.
ವಯೋಮಿತಿ ಅರ್ಹತೆಯು — ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು 56 ವರ್ಷದ ಕೆಳಗಿರಬೇಕು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಸಂಬಳ — ಮೂಲ ವೇತನ 19,900ರೂ.
ಅರ್ಜಿ ಹೇಗೆ ಸಲ್ಲಿಸುವುದು?
ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿದ್ದಲ್ಲಿ, ಕೆಳಗೆ ನೀಡಿರುವ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ.
ಅರ್ಜಿ ಸಲ್ಲಿಸುವ ವಿಳಾಸ :
ಹಿರಿಯ ವ್ಯವಸ್ಥಾಪಕರು, ಮೇಲ್ ಮೋಟಾರ್ ಸೇವೆ, ನಂ. 37, ಗ್ರೀಮ್ಸ್ ರಸ್ತೆ, ಚೆನ್ನೈ-600006.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 08 ಫೆಬ್ರವರಿ 2025
ಅರ್ಜಿ ನಮೂನೆ & ಅಧಿಸೂಚನೆ: https://drive.google.com/file/d/1sQ-O2E46c1enHT-P7e0_nEAuAVj5T-PF/view?usp=drivesdk
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: