ತಲಪಾಡಿ ಬೈಕಂಡಿ ಪ್ರದೇಶದಲ್ಲಿ ಉಚಿತ ಇಫ್ತಾರ್..! - Mahanayaka

ತಲಪಾಡಿ ಬೈಕಂಡಿ ಪ್ರದೇಶದಲ್ಲಿ ಉಚಿತ ಇಫ್ತಾರ್..!

ifthar
10/04/2023

ಈಗ ಮುಸ್ಲಿಂ ಬಾಂಧವರಿಗೆ ಉಪವಾಸದ ಸಮಯ. ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವ್ರತಾಚರಣೆಯಲ್ಲಿರುತ್ತಾರೆ. ಮುಂಜಾನೆ ಎದ್ದು ಸಹರಿ ಊಟ ತಿಂದು ಸಂಜೆ 6:30 ರ ನಂತರ ಸಮಯಕ್ಕನುಗುಣವಾಗಿ ಇಫ್ತಾರ್ ಮೂಲಕ ಉಪವಾಸ ತೊರೆಯುತ್ತಾರೆ.

ಕೆಲವರು ಮನೆಯಲ್ಲಿ, ಮಸೀದಿಗಳಲ್ಲಿ ಉಪವಾಸ ತೊರೆಯುತ್ತಾರೆ. ಇನ್ನೂ ಕೆಲವರು ವಿವಿಧ ಕೆಲಸದ ನಿಮಿತ್ತ ಪ್ರಯಾಣ ಹೋಗುವಾಗಲೇ ಉಪವಾಸ ತೊರೆಯಬೇಕಾದ ಅನಿವಾರ್ಯತೆ. ಇದನ್ನು ಮನಗಂಡು ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಬೈಕಂಡಿ ಪ್ರದೇಶದಲ್ಲಿ ಮಂಗಳೂರಿನಿಂದ ಬಿ. ಸಿ. ರೋಡ್ , ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ ಹೋಗುವವರಿಗೆ ಹ್ಯೂಮನ್ ರೈಟ್ಸ್ ನ ದಕ್ಷಿಣ ಕನ್ನಡ ಗೌರವಾಧ್ಯಕ್ಷ ಎಸ್. ಎಂ. ಮುಸ್ತಫ, ಜಿಲ್ಲಾಧ್ಯಕ್ಷ ಇಕ್ಬಾಲ್ ಮತ್ತು ಕೆ. ಫ್. ಸಿ ಬ್ರದರ್ಸ್ ಫಯಾಜ್ ಮತ್ತು ಇತರ ಸ್ನೇಹಿತರು ಮತ್ತು ಮಿಗ್ ಅರೇಬಿಯಾ ಇವರ ಸಹಕಾರದಲ್ಲಿ ತಲಪಾಡಿ ಕಡೆಯಿಂದ ಕಳೆದ 18 ದಿನಗಳಿಂದ ಉಚಿತ ಇಫ್ತಾರ್ ಕೂಟವನ್ನು ಉಚಿತವಾಗಿ ಪ್ರತಿವರ್ಷ ಆಯೋಜಿಸುತ್ತಾ ಬರಲಾಗುತ್ತಿದ್ದು ಉಪವಾಸ ತೊರೆಯಲು ಬೇಕಾದ ನೀರು, ಖರ್ಜೂರ, ಹಣ್ಣುಹಂಪಲು, ಜ್ಯೂಸ್, ಸಮೋಸ ಹೀಗೆ ವಿವಿಧ ತಿನಿಸುಗಳನ್ನು. ಉಚಿತವಾಗಿ ನೀಡಲಾಗ್ತಿದ್ದು ಎಲ್ಲರಿಗೂ ಉಪಯೋಗಕಾರಿಯಾಗಿದೆ.


ADS

ಇದರ ಸೌಲಭ್ಯವನ್ನು ನೀವು ಪಡೆಯಲು ಹೆಚ್ಚಿನ ಮಾಹಿತಿಗಾಗಿ 9901094857 ಈ ನಂಬರನ್ನು ಸಂಪರ್ಕಿಸಬಹುದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ