ಗಾಂಧೀಜಿಯ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ ನಿಧನ

ಗುಜರಾತ್: ಗಾಂಧೀಜಿಯ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ ನಿಧನರಾಗಿದ್ದು, ನವಸಾರಿಯಲ್ಲಿರುವ ತಮ್ಮ ಮಗ ಡಾ.ಸಮೀರ್ ಪಾರಿಖ್ ಅವರ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ನೀಲಂಬೆನ್ ಪಾರಿಖ್ ಅವರಿಗೆ 93 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 8 ಗಂಟೆಗೆ ಅವರ ಅಂತಿಮ ಯಾತ್ರೆ ನಡೆಯಲಿದೆ. ಬಳಿಕ ವೀರ್ವಾಲ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನೀಲಂಬೆನ್ ಪಾರಿಖ್ ಅವರು ಗಾಂಧಿವಾದಿಯಾಗಿದ್ದರು. ಮಹಿಳಾ ಕಲ್ಯಾಣ ಹಾಗೂ ಮಾನವ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು.
ಜನವರಿ 30, 2008ರಲ್ಲಿ ಗಾಂಧೀಜಿಯ 60ನೇ ಪುಣ್ಯ ತಿಥಿಯಂದು, ಗಾಂಧೀಜಿಯ ಚಿತಾಭಸ್ಮವನ್ನು ನೀಲಂಬೆನ್ ಪಾರಿಖ್ ಗೌರವಯುತವಾಗಿ ವಿಸರ್ಜಿಸಿದ್ದರು.
ನೀಲಂಬೆನ್ ಪಾರಿಖ್ ಯಾವುದೇ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ವಯಸ್ಸಿನ ಕಾರಣ ಕೆಲವು ದಿನಗಳಿಂದ ಊಟ ಮಾಡುತ್ತಿರಲಿಲ್ಲ. ನಂತರ ಅವರ ನಾಡಿಮಿಡಿತ ಕಡಿಮೆಯಾಗಿತ್ತು. ಅವರು ಯಾವುದೇ ನೋವಿಲ್ಲದೇ ಕಣ್ಮುಚ್ಚಿದ್ದಾರೆ ಎಂದು ಅವರ ಮಗ ಸಮೀರ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: