ಗಣೇಶ ವಿಸರ್ಜನೆಗೆ ಸಮುದ್ರಕ್ಕೆ ಹಾರಿದ ಮೂವರು ಮಕ್ಕಳು ನೀರುಪಾಲು! - Mahanayaka

ಗಣೇಶ ವಿಸರ್ಜನೆಗೆ ಸಮುದ್ರಕ್ಕೆ ಹಾರಿದ ಮೂವರು ಮಕ್ಕಳು ನೀರುಪಾಲು!

ganesh visarjan
20/09/2021

ಮುಂಬೈ: ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಐವರು ಮಕ್ಕಳು ಸಮುದ್ರದಲ್ಲಿ ಮುಳುಗಿದ ಘಟನೆ ನಡೆದಿದ್ದು, ಭಾನುವಾರ ರಾತ್ರಿ ನಡೆದ ಘಟನೆಯ ವೇಳೆ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ಸಮುದ್ರ ಪಾಲಾಗಿದ್ದಾರೆ ಎಂದು ವರದಿಯಾಗಿದೆ.

ಬೃಹತ್ ಮುಂಬೈ ಮಹಾನಗರ ಪಾಲಿಕೆ ಈ ಸಂಬಂಧ ನೀಡಿರುವ ಪ್ರಕಟನೆಯಲ್ಲಿ, ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸಮುದ್ರದಲ್ಲಿ ಮುಳುಗಿದ ಐವರು ಮಕ್ಕಳ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳಿಗೆ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.


ADS

ಗಣೇಶ ಮೂರ್ತಿ ವಿಸರ್ಜನೆಗಾಗಿ ಮಕ್ಕಳು ಸಮುದ್ರಕ್ಕೆ ಜಿಗಿದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನು ಸ್ಥಳೀಯರು ಹರಸಾಹಸ ಪಟ್ಟು ರಕ್ಷಣೆ ಮಾಡಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇನ್ನೂ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು,  ಈ ಸ್ಥಳ ಗಣೇಶ ಮೂತ್ರಿ ವಿಸರ್ಜನೆಗೆ ನಿಗದಿಪಡಿಸಿದ ಸ್ಥಳ ಅಲ್ಲ. ಇಲ್ಲಿಗೆ ಬರದಂತೆ ನಿರ್ಬಂಧಿಸಿದ್ದೆವು. ಆದರೂ, ಕೆಲವು ಕಿಡಿಗೇಡಿಗಳು ಗಣಪತಿ ವಿಸರ್ಜನೆಗಾಗಿ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಅಶ್ಲೀಲ ವಿಡಿಯೋ ಪ್ರಕರಣ: 2 ತಿಂಗಳ ಜೈಲುವಾಸದ ಬಳಿಕ ರಾಜ್ ಕುಂದ್ರಾಗೆ ಜಾಮೀನು

ಮಠದಲ್ಲಿಯೇ ಸ್ವಾಮೀಜಿಯ ಮರ್ಡರ್!? | ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ

ನಾನು ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೇನೆ | ನಟ ಸೋನು ಸೂದ್‌

ಪಂಜಾಬ್ ನಲ್ಲಿ ಪ್ರಥಮ ದಲಿತ ಸಿಎಂ ಆಗಿ ಚರಣಜಿತ್ ಸಿಂಗ್ ಆಯ್ಕೆ | ದೇಶದ್ಯಾದ್ಯಂತ ‘ದಲಿತ ಸಿಎಂ’ ಚರ್ಚೆ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!

ಇತ್ತೀಚಿನ ಸುದ್ದಿ