ಗಾಝಾ ದಾಳಿ: ಇಸ್ರೇಲ್ ಪ್ರಧಾನಿ, ರಕ್ಷಣಾ ಸಚಿವರಿಗೆ ಅರೆಸ್ಟ್ ವಾರೆಂಟ್
ಗಾಝಾ ಯುದ್ಧ ಅಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯುಆನ್ ಗಾಲಂಟ್ ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಿಸಿದ್ದು ಇದನ್ನು ಜಗತ್ತಿನ ವಿವಿಧ ರಾಷ್ಟ್ರಗಳು ಸ್ವಾಗತಿಸಿವೆ. ಇವರಿಬ್ಬರನ್ನೂ ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುತ್ತೇವೆ ಎಂದು ಜಗತ್ತಿನ ವಿವಿಧ ರಾಷ್ಟ್ರಗಳು ವಾಗ್ದಾನ ಮಾಡಿವೆ.
ಇವರಿಬ್ಬರೂ ನಮ್ಮ ರಾಷ್ಟ್ರ ಪ್ರವೇಶಿಸಿದರೆ ಅವರನ್ನು ಬಂಧಿಸಿ ಹೇಗ್ ನಲ್ಲಿರುವ ಐಸಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ ಎಂದು ವಿವಿಧ ರಾಷ್ಟ್ರಗಳು ಘೋಷಿಸಿವೆ. ಎಲ್ಲರೂ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸಬೇಕು ಮತ್ತು ಇದಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ್ದಾರೆ.
ಕೆನಡಾ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತದೆ ಎಂದು ಅವರು ಹೇಳಿದ್ದಾರೆ. ಐಸಿಸಿ ಅರೆಸ್ಟ್ ವಾರಂಟನ್ನು ರಾಜಕೀಯವಾಗಿ ನೋಡಬಾರದು ಮತ್ತು ಇದನ್ನು ಎಲ್ಲಾ ಯುರೋಪಿಯನ್ ಯೂನಿಯನ್ ರಾಷ್ಟ್ರಗಳೂ ಒಪ್ಪಿಕೊಂಡು ಆದೇಶವನ್ನು ಜಾರಿ ಮಾಡಲು ಮುಂದಾಗಬೇಕು ಎಂದು ಯುರೋಪಿಯನ್ ಯೂನಿಯನ್ ಫಾರಿನ್ ಪಾಲಿಸಿ ಚೀಫ್ ಜೋಸೆಫ್ ಬೋರೆಲ್ ಆಗ್ರಹಿಸಿದ್ದಾರೆ.
ಐಸಿಸಿ ಕ್ರಿಮಿನಲ್ ಕೋರ್ಟ್ ನಲ್ಲಿ 120 ರಾಷ್ಟ್ರಗಳು ಸದಸ್ಯತನ ಹೊಂದಿದ್ದು ಈ ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರಕ್ಕೆ ನೆತನ್ಯಾಹು ಮತ್ತು ಗ್ಯಾಲೆಂಟ್ ಅವರು ಪ್ರಯಾಣಿಸಿದರೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕಾಗಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಕಾನೂನಿಗೆ ನಾವು ಬದ್ಧವಾಗಿರುವುದಾಗಿ ನೆದರ್ಲ್ಯಾಂಡ್ ಸ್ವಿಜರ್ಲ್ಯಾಂಡ್ ಐರ್ಲ್ಯಾಂಡ್ ಇಟಲಿ ಆಸ್ಟ್ರಿಯಾ ಮುಂತಾದ ರಾಷ್ಟ್ರಗಳು ಘೋಷಿಸಿವೆ. ಐಸಿಸಿಯ ಅರೆಸ್ಟ್ ವಾರೆಂಟನ್ನು ತಾವು ಪಾಲಿಸುವುದಾಗಿ ಫ್ರಾನ್ಸ್ ಘೋಷಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj