HDFC ಪರಿವರ್ತನ್ ವಿದ್ಯಾರ್ಥಿ ವೇತನ: 75 ಸಾವಿರವರೆಗೆ ಸ್ಕಾಲರ್ ಶಿಪ್ ಪಡೆಯಿರಿ - Mahanayaka
6:25 PM Wednesday 11 - December 2024

HDFC ಪರಿವರ್ತನ್ ವಿದ್ಯಾರ್ಥಿ ವೇತನ: 75 ಸಾವಿರವರೆಗೆ ಸ್ಕಾಲರ್ ಶಿಪ್ ಪಡೆಯಿರಿ

HDFC Bank Parivartan
26/11/2024

HDFC Scholarship 2024: ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ(HDFC Bank) ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಾಗುವ ಉದ್ದೇಶದಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ಯಾರೆಲ್ಲ ಪಡೆಯಬಹುದು? ಹೇಗೆ ಪಡೆಯ ಬಹುದು ಎನ್ನುವ ವಿವರ ಇಲ್ಲಿದೆ.

ಅರ್ಹತೆ:

1-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರಕಾರಿ, ಖಾಸಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ವರ್ಷ ಕನಿಷ್ಠ ಶೇಕಡ 55 ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.

ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಡಿಪ್ಲೊಮಾ ಸ್ಕಾಲರ್ ಷಿಪ್ ಗೆ ಅರ್ಜಿ ಸಲ್ಲಿಸುವುದಾದರೆ, 12 ತರಗತಿಯ ಬಳಿಕ ಡಿಪ್ಲೊಮಾಕ್ಕೆ ಸೇರಿರುವವರಿಗೆ ಮಾತ್ರ ಅವಕಾಶವಿದೆ.

ವಿದ್ಯಾರ್ಥಿ ವೇತನದ ಮೊತ್ತ: 1-6ನೇ ತರಗತಿಯವರಿಗೆ 15,000 ರೂಪಾಯಿ, 7–12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 18,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 31, 2024

ಪದವಿ ವಿದ್ಯಾರ್ಥಿಗಳಿಗೆ ಎಚ್ಡಿಎಫ್ಸಿ ಪರಿವರ್ತನ್ ಸ್ಕಾಲರ್ಷಿಪ್
ಅರ್ಹತೆಗಳು:

ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ ಮುಂತಾದ ಪದವಿ ಕೋರ್ಸ್ಗಳು, ಬಿಟೆಕ್, ಎಂಬಿಬಿಎಸ್, ಎಲ್ಎಲ್ಬಿ, ಬಿಆರ್ಕ್, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್ಗಳನ್ನು ಕಲಿಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ಕೋರ್ಸ್ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.

ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಡಿಪ್ಲೊಮಾ ಸ್ಕಾಲರ್ಷಿಪ್ಗೆ ಅರ್ಜಿ ಸಲ್ಲಿಸುವುದಾದರೆ, 12 ತರಗತಿಯ ಬಳಿಕ ಡಿಪ್ಲೊಮಾಕ್ಕೆ ಸೇರಿರುವವರಿಗೆ ಮಾತ್ರ ಅವಕಾಶವಿದೆ.

ವಿದ್ಯಾರ್ಥಿ ವೇತನದ ಮೊತ್ತ: ಸಾಮಾನ್ಯ ಪದವಿ ಕೋರ್ಸ್- 30 ಸಾವಿರ ರೂಪಾಯಿ, ವೃತ್ತಿಪರ ಪದವಿ ಕೋರ್ಸ್ 50,000 ರೂಪಾಯಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2024

ಸ್ನಾತಕೋತ್ತರ ಪದವೀಧರರಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಪರಿವರ್ತನ್ ವಿದ್ಯಾರ್ಥಿವೇತನ
ಅರ್ಹತೆಗಳು:

ಎಂಕಾಂ, ಎಂಎ ಮುಂತಾದ ಜನರಲ್ ಕೋರ್ಸ್, ಎಂಟೆಕ್, ಎಂಬಿಎ ಮುಂತಾದ ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಕಲಿಯುವವರು ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ಕೋರ್ಸ್ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನ ಮೊತ್ತ: ಜನರಲ್ ಸ್ನಾತಕೋತ್ತರ ಪದವಿ: 35 ಸಾವಿರ ರೂಪಾಯಿ, ವೃತ್ತಿಪರ ಸ್ನಾತಕೋತ್ತರ ಕೋರ್ಸ್: 75 ಸಾವಿರ ರೂಪಾಯಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2024

ಎ ಚ್ಡಿಎಫ್ ಸಿ ಪರಿವರ್ತನ್ ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಲಿಂಕ್: https://www.hdfcbankecss.com/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ