ಓದುವುದರಲ್ಲಿ ನಶೆ ಕಂಡುಕೊಳ್ಳಿ, ಮಾದಕ ವಸ್ತುಗಳ ನಶೆ ಬೇಡ: ವಿದ್ಯಾರ್ಥಿಗಳಿಗೆ ಶಿವರಾಜ್ ಕುಮಾರ್ ಕಿವಿಮಾತು
ಹುಬ್ಬಳ್ಳಿ: ಓದುವುದರಲ್ಲಿ ನಶೆ ಕಂಡುಕೊಳ್ಳಿ, ಮಾದಕ ವಸ್ತುವಿನ ನಶೆ ಬೇಡ ಎಂದು ನಟ ಶಿವರಾಜ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪತ್ನಿ ಗೀತಾಶಿವರಾಜ್ ಕುಮಾರ್ ಅವರ ಜೊತೆಗೆ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರತಿ ಅಭಿಮಾನಿಯನ್ನು ಸ್ನೇಹಿತನನ್ನಾಗಿ ನೋಡುತ್ತೇನೆ. ಅಭಿಮಾನಿ ಅಂತ ನೋಡಿದರೆ ಬೇರೆ ರೀತಿ ನೋಡಬೇಕಾಗುತ್ತದೆ. ಡ್ರಗ್ಸ್ ನಿಂದ ನಾವು ದೂರ ಇರಬೇಕು. ಶಬ್ದವೇಧಿ ಸಿನಿಮಾದಲ್ಲಿ ಅಪ್ಪಾಜಿ ಅದ್ಭುತವಾಗಿ ಹೇಳಿದ್ದಾರೆ. ಹುಟ್ಟು ಅನ್ನೋದು ಒಂದು ಗಿಫ್ಟ್ ಅದನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ ಹುಡುಕಿ, ಬೇರೆ ಎಲ್ಲದರಲ್ಲೂ ನಶೆ ಇದೆ. ಮಾದಕ ವಸ್ತುವಿಗೆ ನಾವು ಯಾವಾಗ ದಾಸರಾಗುತ್ತೇವೆಯೋ ಜೀವನ ಹಾಳಾಗುತ್ತದೆ. ಯಾರಾದರೂ ಡ್ರಗ್ಸ್ ಸೇವಿಸುತ್ತಿದ್ದರೆ ಅವರನ್ನು ಪೊಲೀಸರಿಗೆ ಹಿಡಿದುಕೊಡಿ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: