2024ರ ಜಾಗತಿಕ ಹಸಿವಿನ ಸೂಚ್ಯಂಕ ಬಿಡುಗಡೆ: 105ನೇ ಸ್ಥಾನದಲ್ಲಿ ಭಾರತ
2024ರ ಜಾಗತಿಕ ಹಸಿವಿನ ಸೂಚ್ಯಂಕ ಬಿಡುಗಡೆಯಾಗಿದ್ದು ಒಟ್ಟು 127 ರಾಷ್ಟ್ರಗಳ ಪೈಕಿ ಭಾರತ 105ನೇ ಸ್ಥಾನದಲ್ಲಿದೆ. ನೆರೆ ರಾಷ್ಟ್ರಗಳಾದ ಶ್ರೀಲಂಕಾ ನೇಪಾಳ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳಿಗಿಂತಲೂ ಭಾರತ ಹಿಂದಿರುವುದನ್ನು ಈ ಸೂಚ್ಯಂಕ ತೋರಿಸಿದೆ.
ಭಾರತ ತನ್ನ ನೆರೆ ರಾಷ್ಟ್ರವಾದ ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆಯಷ್ಟೇ ಮೇಲಿದೆ. ದೇಶದಲ್ಲಿ ಮಕ್ಕಳ ಅಪೌಷ್ಟಿಕತೆಯು ಗಂಭೀರ ಪ್ರಮಾಣದಲ್ಲಿದೆ ಎಂದು ಈ ಸೂಚ್ಯಂಕ ವಿವರಿಸಿದೆ.
ಜಾಗತಿಕ ಹಸಿವಿನ ಸೂಚ್ಯಂಕ ಪ್ರತಿ ವರ್ಷ ಬಿಡುಗಡೆಯಾಗಲಿದ್ದು ಇದರ ಆಧಾರದಲ್ಲಿ ಪ್ರತಿ ರಾಷ್ಟ್ರಗಳು ತಮ್ಮ ದೇಶದ ಹಸಿವಿನ ಪ್ರಮಾಣ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಲೋಚಿಸುತ್ತಿದೆ. ಭಾರತದ ನೆರೆಯ ರಾಷ್ಟ್ರಗಳು ಹಸಿವಿಗೆ ಸಂಬಂಧಿಸಿದಂತೆ ಭಾರತಕ್ಕಿಂತ ಮೇಲಿರುವುದು ಭಾರತದ ಪಾಲಿಗೆ ಗಂಭೀರ ವಿಷಯವಾಗಬೇಕು ಎಂದು ಹೇಳಲಾಗಿದೆ. 2030ರ ವೇಳೆಗೆ ಜಗತ್ತಿನಲ್ಲೇ ಹಸಿವಿನ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು ಎಂಬುದು ಈ ಸೂಚ್ಯಂಕ ತಯಾರಿಸಿದವರ ಉದ್ದೇಶವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth