‘ಗೋ ಕೊರೊನಾ ಗೋ’ ಖ್ಯಾತಿಯ ರಾಮ್ ದಾಸ್ ಅಠವಳೆ ಈಗ ‘ನೋ ಕೊರೊನಾ ನೋ’ ಅಂದ್ರು! - Mahanayaka

‘ಗೋ ಕೊರೊನಾ ಗೋ’ ಖ್ಯಾತಿಯ ರಾಮ್ ದಾಸ್ ಅಠವಳೆ ಈಗ ‘ನೋ ಕೊರೊನಾ ನೋ’ ಅಂದ್ರು!

28/12/2020

ಮುಂಬೈ: ಗೋ ಕೊರೊನಾ ಗೋ ಎಂದು ಹೇಳಿ ಟ್ರೋಲ್ ಆಗಿದ್ದ ಕೇಂದ್ರ ಸಚಿವ ರಾಮ್ ದಾಸ್ ಅಠವಳೆ ಅವರು ಇದೀಗ ರೂಪಾಂತರಗೊಂಡಿರುವ ಕೊರೊನಾ ವೈರಸ್ ಗೆ ‘ನೋ ಕೊರೊನಾ ನೋ” ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಆರಂಭದ ಸಂದರ್ಭದಲ್ಲಿ  ರಾಮದಾಸ್‌ ಅಠವಳೆ ಗೋ ಕೊರೊನಾ ಗೋ ಎಂದು ಹೇಳಿದ್ದರು. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. ಗೋ ಕೊರೊನಾ ಗೋ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಎಂದರೆ, ಇದನ್ನು ಡಿಜೆ ಮಾಡಲಾಗಿತ್ತು, ಇಡೀ ವಿಶ್ವಾದ್ಯಂತ ಈ ವಿಡಿಯೋ ಹರಡಿತ್ತು. ಭಾರತದ ಯುವಕರಂತೂ ಇದನ್ನು ಟ್ರೋಲ್ ಮಾಡಿದ್ದು ಅಷ್ಟಿಷ್ಟಲ್ಲ.

ಈ ಹಿಂದೆ ನಾನು ‘ಗೋ ಕೊರೊನಾ ಗೋ’ ಎಂದು ಹೇಳಿದ್ದೆ. ಆದರೆ, ಅದು ನನ್ನ ಬಳಿಯೂ ಬಂದಿತ್ತು. ಅಂದರೆ, ನನಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ನನ್ನ ಘೋಷಣೆಯಂತೆ ಈಗ ಹಳೆಯ ಕೊರೊನಾ ತೊಲಗುತ್ತಿದೆ. ಹೊಸ ರೂಪ ಪಡೆದುಕೊಂಡು ಬರುತ್ತಿರುವ ಕೊರೊನಾ ವೈರಸ್‌ಗೆ ನಾನು ‘ನೋ ಕೊರೊನಾ ನೋ’ ಎನ್ನುತ್ತೇನೆ ಎಂದು ಇದೀಗ ರಾಮ್ ದಾಸ್ ಅಠವಳೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿ