ಗ್ರಾ.ಪಂ. ಅಧ್ಯಕ್ಷೆಯಾಗಿ ಆಯ್ಕೆಯಾದ  ಪಾಕಿಸ್ತಾನದ ಮಹಿಳೆ! | ಯಾವ ಊರಿನಲ್ಲಿ? - Mahanayaka
3:04 PM Thursday 12 - September 2024

ಗ್ರಾ.ಪಂ. ಅಧ್ಯಕ್ಷೆಯಾಗಿ ಆಯ್ಕೆಯಾದ  ಪಾಕಿಸ್ತಾನದ ಮಹಿಳೆ! | ಯಾವ ಊರಿನಲ್ಲಿ?

01/01/2021

ಲಕ್ನೋ: ಉತ್ತರ ಪ್ರದೇಶದ ಇಟವಾದಲ್ಲಿ ಪಾಕಿಸ್ತಾನದ ಮಹಿಳೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ದೊರಕಿದ್ದು, ಪಂಚಾಯತಿ ಚುನಾವಣೆಯಲ್ಲಿ ಭಾಗವಹಿಸಿದ ಮಹಿಳೆ ಹಂಗಾಮಿ ಅಧ್ಯಕ್ಷರಾಗಿರುವ ಘಟನೆ ನಡೆದಿದೆ.

ಪಾಕಿಸ್ತಾನದ ಮಹಿಳೆಯಾಗಿದ್ದರೂ ಅವರು ಭಾರತದ ಸ್ಥಳೀಯ ನಿವಾಸಿಯೊಬ್ಬರನ್ನು ವಿವಾಹವಾಗಿದ್ದಾರೆ. 40 ವರ್ಷಗಳಿಂದ ಅವರು ಭಾರತದಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ, ಇದೀಗ ಅವರು ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಿ ಅಧ್ಯಕ್ಷರಾಗುತ್ತಿದ್ದಂತೆಯೇ ಇದೊಂದು ಸಮಸ್ಯೆ ಎಂದು ಬಿಂಬಿಸಲಾಗಿದೆ. ಕಾನೂನಿನ ಪ್ರಕಾರ ಯಾವುದೇ ವಿದೇಶಿ ಪ್ರಜೆ ಭಾರತದಲ್ಲಿ 5 ವರ್ಷಕ್ಕಿಂತ ಹೆಚ್ಚು ನೆಲೆಸಿದ್ದರೆ, ಅವರು ಭಾರತದ ಪೌರರಾಗುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ರಾಜಕೀಯ ಕಾರಣಗಳಿಗಾಗಿ ಅನಗತ್ಯ ವಿವಾದಗಳು ಆಗಾಗ ಕಂಡು ಬರುತ್ತದೆ.

40 ವರ್ಷ ಭಾರತದಲ್ಲಿ ವಾಸಿಸಿರುವ ಕರಾಚಿ ಮೂಲದ ಮಹಿಳೆ ಬಾನು ಬೇಗಂ,  ಪಾಕಿಸ್ತಾನಿ ಆಗಿದ್ದರೆ, ಅವರಿಗೆ ಹೇಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಯಿತು? ಅವರಿಗೆ ಆಧಾರ್ ಕಾರ್ಡ್, ಓಟರ್ ಐಡಿ ಹೇಗೆ ಸಿಕ್ಕಿತು? ಇತರ ದಾಖಲೆಗಳನ್ನು ಅವರು ಹೇಗೆ ಸಲ್ಲಿಸಿದರು? ಎಂದು ಜನರು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಾಗ ಈ ವಿವಾದ ಇರಲಿಲ್ಲ, ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಲಾದಾಗ ಈ ವಿವಾದ ಏಕೆ ಎದ್ದಿದೆ ಎಂದು ಜನ ಪ್ರಶ್ನಿಸಿದ್ದಾರೆ.


Provided by

ಇನ್ನೂ ಈ ಸಂಬಂಧ ತನಿಖೆಗೂ ಆದೇಶ ನೀಡಲಾಗಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಈ ಘಟನೆ ಸಂಬಂಧ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

ಇತ್ತೀಚಿನ ಸುದ್ದಿ