ವರದಕ್ಷಿಣೆ, ಬೈಕ್ ಕೊಟ್ಟಿಲ್ಲ ಎಂದು ಮದುವೆ ಮಂಟಪದಿಂದ ಓಡಿದ ವರ!
ಲಕ್ನೋ: ವರದಕ್ಷಿಣೆ ಹಾಗೂ ಬೈಕ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ವರನೊಬ್ಬ ಮದುವೆ ಮಂಟಪದಿಂದ ಓಡಿ ಹೋದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಬೈಕ್ ಕೊಡಿಸುವಷ್ಟು ನಮ್ಮ ಬಳಿ ಹಣವಿಲ್ಲ ಎಂದು ವಧುವಿನ ತಂದೆ ಹೇಳಿದ ಹಿನ್ನೆಲೆಯಲ್ಲಿ ವರನ ತಂದೆ ಶ್ಯಾಮ್ ಲಾಲ್ ಎಂಬಾತ ಮದುವೆಯನ್ನೇ ರದ್ದುಗೊಳಿಸಿದ್ದು, ವರನೊಂದಿಗೆ ಮಂಟಪದಿಂದ ತೆರಳಿದ್ದಾನೆ.
ಈ ವೇಳೆ ನೊಂದ ವಧುವಿನ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದು, ಈ ಮದುವೆ ನಡೆಯದಿದ್ದರೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಧು ಪಟ್ಟು ಹಿಡಿದಿದ್ದಾಳೆ.
ಕೊನೆಗೆ, ವರ ಶೀಘ್ರವೇ ಬರುತ್ತಾನೆ. ಈ ಮದುವೆಯನ್ನು ನಡೆಸಿಕೊಡುತ್ತೇವೆ ಎಂದು ಪೊಲೀಸರು ನೀಡಿದ ವಾಗ್ದಾನದ ಹಿನ್ನೆಲೆಯಲ್ಲಿ ವಧುವಿನ ಕಡೆಯವರು ಸ್ಥಳದಿಂದ ತೆರಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka