ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗೋಶಾಲೆ ನಿರ್ಮಾಣ: ಸಂಕಷ್ಟಕ್ಕೆ ಸುಲಭ ಪರಿಹಾರ ಸೂಚಿಸಿದ ಜ್ಯೋತಿಷಿ
ಸಂಕಷ್ಟಗಳ ನಿವಾರಣೆಗಾಗಿ ಜ್ಯೋತಿಷಿಯ ಸಲಹೆಯಂತೆ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗೋಶಾಲೆ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ. ಇದರಂತೆ ಸೂರತ್ ನ ವೀರ ನರ್ಮದಾ ಸೌತ್ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ.
ಜ್ಯೋತಿಷಿಯ ಸಲಹೆಯಂತೆ ಈ ವಿಶ್ವವಿದ್ಯಾಲಯ ಶ್ರೀಮಂತ ವಾಗುವುದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಸ್ಪಷ್ಟಪಡಿಸಿದ್ದಾರೆ.
ಹೊಸ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ನಿರ್ಮಾಣ ಮಾಡುವುದಕ್ಕಾಗಿ ನಿಗದಿಪಡಿಸಲಾದ ಸ್ಥಳವನ್ನು ಜ್ಯೋತಿಷಿಗೆ ತೋರಿಸಲಾಗಿತ್ತು. ಅಲ್ಲಿ ಒಂದು ತಿಂಗಳ ಕಾಲ 5 ರಿಂದ 7 ಗೋವುಗಳನ್ನು ಕಟ್ಟಿಹಾಕಿ ಅವುಗಳ ಆರೈಕೆ ಮಾಡಿದರೆ ಪಾಸಿಟಿವ್ ಎನರ್ಜಿ ಲಭ್ಯವಾಗಬಹುದು ಮತ್ತು ಆಡಳಿತ ಸುಗಮವಾಗಬಹುದು ಎಂದು ಜ್ಯೋತಿಷಿ ಸಲಹೆ ನೀಡಿದರು. ಅದರಂತೆ ಈ ತೀರ್ಮಾನ ಮಾಡಿದ್ದೇವೆ ಎಂದು ವೈಸ್ ಚಾನ್ಸಲರ್ ಹೇಳಿದ್ದಾರೆ.
ತಾತ್ಕಾಲಿಕವಾಗಿ ಗೋಶಾಲೆಯನ್ನು ನಿರ್ಮಿಸಿ ಒಂದು ತಿಂಗಳ ಕಾಲ ಗೋವುಗಳನ್ನು ಇಲ್ಲಿ ಕಟ್ಟಿ ಹಾಕಿ ಉಪಚರಿಸಲಾಗುವುದು ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj