ಬೆಟ್ಟಗುಡ್ಡಗಳ ಮ್ಯಾಲಿನ ಸವಾರಿ: ಮೈನವಿರೇಳಿಸೋ ಮಸ್ತಿ..!
ಹೊಂಡ ಗುಂಡಿಗಳು ಲೆಕ್ಕಕ್ಕಿಲ್ಲ.. ಬೆಟ್ಟಗುಡ್ಡಗಳ ಮ್ಯಾಲಿನ ಸವಾರಿ ಮೈನವಿರೇಳಿಸಿತ್ತಲ್ಲ.. ನೀರು ಹರೀತಿದ್ರೂ ಅದೇ ಖದರ್.. ಕೆಸರಲ್ಲಿ ಸಿಲುಕಿಕೊಂಡ್ರೂ ಅದೇ ಪವರ್.. ಹಸಿರ ಕಾಫಿತೋಟ, ಜಾರೋ ಗದ್ದೆಯಲ್ಲಂತೂ ಜೀಪ್ ಡ್ರೈವಿಂಗ್ ಬಲು ಸೂಪರ್. ಕಾಫಿನಾಡಿನ ಬಿಂದಾಸ್ ಆಫ್ ರೋಡ್ ಜೀಪ್, ಜಿಪ್ಸಿ ಱಲಿ. ನೀವೇ ನೋಡಿ..
ಗುಂಡಿಯಾದ್ರೇನು, ಕೆಸರಾದ್ರೇನು ನುಗ್ತಾ ಇರೋದೇ.! ಜೀಪ್.. ಜಿಪ್ಸಿ ನೀರಲ್ಲಿ ಮುಳುಗ್ತಿದ್ರೂ ಹೋಗ್ತಾ ಇರೋದೇ..! ಬೆಟ್ಟ-ಗುಡ್ಡ ಸಿಕ್ಕಿದ್ರೂ ಏರ್ತಾ ಇರೋದೇ..! ಕಾಡು-ಮೇಡಿನ ದಾರಿಲ್ಲೂ ರುಯ್-ರುಯ್ ಅಂತಾ ಓಡಿಸ್ತಾ ಇರೋದೇ.! ವಾಹ್.. ಮೈನವಿರೇಳಿಸುವ, ಎದೆ ನಡುಗಿಸುವ ಈ ಆಫ್ ರೋಡ್ ರ್ಯಾಲಿ ನಡೆದಿದ್ದು ಕಾಫಿನಾಡಿನಲ್ಲಿ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿವಿಧೆಡೆ ನಡೆದ ಈ ಜಬರ್ ದಸ್ತ್ ಆಫ್ ರೋಡ್ ಬೀಟ್, ರ್ಯಾಲಿ ಪ್ರಿಯರಿಗೆ ವೀಕೆಂಡ್ ನಲ್ಲಿ ಭರ್ಜರಿ ಎಂಜಾಯ್ಮೇಟ್ ನೀಡ್ತು. ಶೃಂಗೇರಿ ಅಡ್ವೆಂಚರಸ್ ಅಂಡ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ನಿಂದ ಆಯೋಜನೆಗೊಂಡಿದ್ದ ಈ ಮಲ್ನಾಡ್ ಥ್ರಿಲ್ಸ್ ಎಂಬ ಆಫ್ ರೋಡ್ ಈವೆಂಟ್ನಲ್ಲಿ 80ಕ್ಕೂ ಅಧಿಕ ಜೀಪ್, ಜಿಪ್ಸಿಗಳು ಎಂಟ್ರಿಕೊಟ್ಟಿದ್ದವು. ರಸ್ತೆಯೇ ಇಲ್ಲದ ಬೆಟ್ಟಗುಡ್ಡಗಳನ್ನ ಸೀಳಿಕೊಂಡು ಸಾಗೋ ಈ ಆಫ್ ರೋಡ್ ರ್ಯಾಲಿ ನೆರೆೆದಿದ್ದ ಸ್ಪರ್ಧಿಗಳಿಗೆ ಸಖತ್ ರೋಮಾಂಚನಕಾರಿ ಅನುಭವ ನೀಡ್ತು.
ಸುಮಾರು 30 ಕಿಲೋ ಮೀಟರ್ ಉದ್ದದ ಟ್ರ್ಯಾಕ್ ಸಾಹಸ ಪ್ರಿಯರಿಗೆ ಸಖತ್ ಥ್ರಿಲ್ಲಿಂಗ್ ಅನುಭವ ನೀಡಿ, ಕೂಲ್ ಕೂಲ್ ವಾತಾವರಣದಲ್ಲೂ ಬಿಸಿ ಏರುವ ಹಾಗೇ ಮಾಡ್ತು. ಕಾಫಿ–ಅಡಿಕೆ ತೋಟದ ಮಧ್ಯೆ ಕೆಸರುಮಯ ರಸ್ತೆಗಳಲ್ಲಿ ಸಾಗಿದ ಅಡ್ವೆಂಚರ್ ಡ್ರೈವ್, ಸ್ಪರ್ಧಿಗಳ ಎದೆ ನಡುಗಿಸುವಂತಿತ್ತು, ಆದ್ರೂ ರುಯ್.. ರುಯ್ ಅಂತಾ ಸದ್ದು ಮಾಡುತ್ತಾ ವಾಹನ ಚಲಾಯಿಸಿದ ಸ್ಪರ್ಧಿಗಳ ಗಡ್ಸಂತೂ ಸೂಪರೋ ಸೂಪರ್. ಚಿಕ್ಕಮಗಳೂರಿನ ಸ್ಫರ್ಧಿಗಳು ಸೇರಿದಂತೆ ಹಾಸನ, ಕೊಡಗು, ಮೈಸೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಕೇರಳ, ಡೆಲ್ಲಿಯಿಂದಲೂ ರ್ಯಾಲಿ ಪ್ರಿಯರು ಆಗಮಿಸಿ ಆಫ್ ರೋಡ್ ಈವೆಂಟ್ನ ಮಸ್ತ್ ಎಂಜಾಯ್ ಮಾಡಿದ್ರು.
ಚಿಕ್ಕ ಚಿಕ್ಕ ನದಿಗಳ ಮಧ್ಯೆ… ಜಾರೋ ಗದ್ದೆಗಳ ನಡುವೆ.. ಜೀಪ್ ನ ಶರವೇಗ ನೋಡಿ ನೆರೆದಿದ್ದವರು ಫಿಧಾ ಆದ್ರು. ಇನ್ನೂ ಎತ್ತರದ ಗುಡ್ಡದಂತಿದ್ದ ಜಾಗದಲ್ಲೂ ಜೀಪ್-ಜಿಪ್ಸಿಗಳು ಹತ್ತಿಸುವ ಮೂಲಕ ಚಾಲಕರು ತಮ್ಮ ಚಾಕಚಕ್ಯತೆಯನ್ನ ತೋರಿಸಿದ್ರು. ವೃತ್ತಿಪರ ಸ್ಪರ್ಧಿಗಳ ಜೊತೆಗೆ ಹವ್ಯಾಸಿ ಸವಾರರೂ ಕೂಡ ತಮ್ಮ ಸಾಮರ್ಥ್ಯ ಪಣಕ್ಕಿಟ್ಟು ಆಫ್ ರೋಡ್ ಬೀಟ್ ನ ಸವಿಯನ್ನ ಸಖತ್ತಾಗಿಯೇ ಸವಿದ್ರು. ಕೇವಲ ಪುರುಷ ಸವಾರರು ಮಾತ್ರವಲ್ಲದೇ ಮಹಿಳೆಯರು ಕೂಡ ಆಫ್ ರೋಡ್ ಈವೆಂಟ್ ನಲ್ಲಿ ಭಾಗವಹಿಸಿ ಸ್ಪರ್ಧೆಗೆ ಮತ್ತಷ್ಟು ಮೆರಗು ತಂದ್ರು.
ಅಂದಾಗೆ ಕಾಫಿನಾಡಿನಲ್ಲಿ ಜೀಪ್ ಹಾಗೂ ಕಾರ್ ಱಲಿಗಳಿಗೇನು ಬರವಿಲ್ಲ. ಹೆಚ್ಚಾಗಿ ಬೇಸಿಗೆ ಸಂದರ್ಭದಲ್ಲಿ ಈ ರೀತಿಯ ಈವೆಂಟ್ ಗಳಂತೂ ನಡೀತಲೇ ಇರುತ್ವೆ. ಆದ್ರೆ ನವೆಂಬರ್ ನ ಚಳಿಯ ಮಧ್ಯೆಯೂ ತಂಪಾದ ವಾತಾವರಣದ ನಡುವೆ ನಡೆದ ಫೋರ್ ವ್ಹೀಲ್ ಜೀಪ್-ಜಿಪ್ಸಿ ಆಫ್ ರೋಡ್ ಱಲಿ ನಿಜಕ್ಕೂ ಕಾಫಿನಾಡಿನ ಮಂದಿಗೂ ಖುಷಿ ತರಿಸಿತು. ಕ್ರೀಡೆಗೆ ಹೆಸರಾದ ಕಾಫಿನಾಡಲ್ಲಿ ಸಾಹಸಮಯ ಕ್ರೀಡೆಗಳು ಅಂದ್ರೆ ಕೊಂಚ ಹೆಚ್ಚಾಗೆ ಥ್ರಿಲ್ಲಿಂಗ್ ಇರುತ್ತೆ. ಒಟ್ನಲ್ಲಿ ರೋಮಂಚನಕಾರಿಯಾಗಿ ನಡೆದ ಆಫ್ ರೋಡ್ ಭೀಟ್, ಸ್ಪರ್ಧಿಗಳಿಗೆ ಡೇರಿಂಗ್-ಡ್ಯಾಶಿಂಗ್ ಎಕ್ಸ್ಪೀಯರಿನ್ಸ್ ನೀಡಿದ್ರೆ, ಅಲ್ಲಲ್ಲಿ ನಿಂತು ನೋಡಿದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಭರ್ಜರಿ ವೀಕೆಂಡ್ ರಸದೌತಣವ ನೀಡಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka