ಉತ್ತರಾಧಿಕಾರಿ: ಹತ್ಯೆಗೀಡಾದ ಹಮಾಸ್ ನಾಯಕ ಹನಿಯರ ಉತ್ತರಾಧಿಕಾರಿಯ ನೇಮಕ

ಇರಾನ್ ನಲ್ಲಿ ಹತ್ಯೆಗೀಡಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರ ಉತ್ತರಾಧಿಕಾರಿಯಾಗಿ 61 ವರ್ಷದ ಯಹ್ಯಾ ಸಿನ್ವಾರ್ ಅವರನ್ನು ಹಮಾಸ್ ನೇಮಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ರೂವಾರಿ ಈ ಸಿನ್ವಾರ್ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಯಹ್ಯಾಸಿನ್ವರ್ ಅವರನ್ನು ತಕ್ಷಣವೇ ಮುಗಿಸಲು ಇಸ್ರೇಲ್ ನ ಸಚಿವ ಕರೆ ನೀಡಿದ್ದಾರೆ. ಹಮಾಸನ್ನು ನಿರ್ಮೂಲನೆ ಮಾಡುವುದಕ್ಕೆ ಈ ವ್ಯಕ್ತಿಯ ಆಯ್ಕೆ ಒಂದು ಪ್ರಬಲ ಆಧಾರ ವಾಗಲಿದೆ ಎಂದು ವಿದೇಶಾಂಗ ಸಚಿವ ಇಸ್ರಾಯಿಲ್ ಕಾಡಿಸಿ ಹೇಳಿದ್ದಾರೆ.
ಕಳೆದ ವಾರ ಇಸ್ಮಾಯಿಲ್ ಹನಿಯ ಅವರ ಹತ್ಯೆಯಾಗಿತ್ತು.
ಇರಾನ್ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿ ತನ್ನ ನಿವಾಸದಲ್ಲಿದ್ದ ವೇಳೆ ಅವರ ಹತ್ಯೆ ನಡೆದಿದೆ. ಅವರ ಹತ್ಯೆಗೆ ಸಂಬಂಧಿಸಿದ ಹಲವು ಮಂದಿಯನ್ನು ಬಂಧಿಸಿರುವುದಾಗಿ ಇರಾನ್ ಹೇಳಿದೆ. ಅದರಲ್ಲಿ ಅವರ ನಿವಾಸಕ್ಕೆ ಕಾವಲು ನಿಂತವರು ಮತ್ತು ಸೇನಾ ಪ್ರಮುಖರನ್ನು ಕೂಡ ಬಂಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth