ಅಬ್ಬಬ್ಬಾ.. ಮದ್ಯವನ್ನು ಮುಟ್ಟೇ ನೋಡಿಲ್ವಂತೆ ಮದ್ಯದ ದೊರೆಯ ಪುತ್ರ: ವೈರಲ್ ಆಯ್ತು ಆ ಪೋಸ್ಟ್..!
ಮದ್ಯಪಾನವನ್ನು ತ್ಯಜಿಸುವುದಕ್ಕಾಗಿ ಹತ್ತು ಹಲವು ರೀತಿಯಲ್ಲಿ ಪ್ರಯತ್ನಿಸುವವರಿದ್ದಾರೆ ಮತ್ತು ಇಂತಹರಲ್ಲಿ ಯಶಸ್ವಿಯಾಗುವವರು ಬಹಳ ಕಡಿಮೆ. ಮದ್ಯಪಾನವನ್ನು ತ್ಯಜಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದವರು ಕೆಲವು ಸಮಯಗಳಲ್ಲೇ ಅದನ್ನು ಮುರಿಯುವುದು ವಾಡಿಕೆ. ಆದರೆ ಜಗತ್ತಿಗೇ ಮದ್ಯ ಮಾರಾಟ ಮಾಡುವ ವಿಜಯ್ ಮಲ್ಯ ಅವರ ಮಗ ಹಂಚಿಕೊಂಡಿರುವ ಪೋಸ್ಟ್ ಒಂದು ಇದೀಗ ವೈರಲಾಗಿದೆ. ಕಳೆದ ಆರು ವರ್ಷಗಳಿಂದ ತಾನು ಮದ್ಯವನ್ನು ಮುಟ್ಟಿಯೂ ನೋಡಿಲ್ಲ ಎಂದವರು instagram ನಲ್ಲಿ ಬರೆದುಕೊಂಡಿದ್ದಾರೆ.
‘ನಾನು ಮದ್ಯವನ್ನು ಮುಟ್ಟದೆ 6 ವರ್ಷಗಳೇ ಕಳೆದಿವೆ. ಮದ್ಯಪಾನವನ್ನು ತ್ಯಜಿಸಬೇಕು ಎಂದು ಬಯಸುವವರಿಗಾಗಿ ಈ ನನ್ನ ವಿವರವನ್ನು ನೀಡುತ್ತಿದ್ದೇನೆ. ನಿಮ್ಮ ಪಾಲಿಗೆ ಅತ್ಯುತ್ತಮವಾದುದು ಯಾವುದು ಎಂಬುದನ್ನು ತೀರ್ಮಾನಿಸುವವರು ನೀವೇ ಆಗಿದ್ದೀರಿ.
ನಿಮಗೆ ಉತ್ತರಿಸಬೇಕಾದವರು ನೀವೇ ಆಗಿದ್ದೀರಿ. ಹಾಗೆಯೇ ನಿಮ್ಮಲ್ಲಿ ಬದಲಾವಣೆ ತರಲು ನಿಮ್ಮಿಂದ ಮಾತ್ರ ಸಾಧ್ಯವಿದೆ ಎಂದು ಸಿದ್ಧಾರ್ಥ ಮಲ್ಯ ಬರೆದಿದ್ದಾರೆ.
ಇದಕ್ಕೆ ಸಿದ್ದಾರ್ಥ ಮಲ್ಯ ಅವರ ಪತ್ನಿ ಜಾಸ್ಮಿನ್ ಸಾಂಟಿಯಾಗೋ ಸಹಿತ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳು ಜೂನ್‌ನಲ್ಲಿ ಇವರಿಬ್ಬರ ವಿವಾಹವಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth