ಕದನ ವಿರಾಮ ಒಪ್ಪಂದ: 8 ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್

ಕದನ ವಿರಾಮ ಒಪ್ಪಂದದಂತೆ 8 ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇವರಲ್ಲಿ ಮೂರು ಮಂದಿ ಇಸ್ರೇಲಿಯನ್ನರಾದರೆ ಐದು ಮಂದಿ ಥೈಲ್ಯಾಂಡ್ ನವರು. ಇದೇ ವೇಳೆ ನೂರಕ್ಕಿಂತಲೂ ಅಧಿಕ ಫೆಲಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಹಮಾಸ್ ಬಿಡುಗಡೆಗೊಳಿಸಿದ ಒತ್ತೆಯಾಳುಗಳಲ್ಲಿ ಇಬ್ಬರು ಮಹಿಳೆಯರಿದ್ದಾರೆ ಮತ್ತು ಓರ್ವರು 80 ವಯಸ್ಸಿನ ಹಿರಿಯರಾಗಿದ್ದಾರೆ.
ಇದೇ ವೇಳೆ ಗಾಝಾದ ನಾಗರಿಕರನ್ನು ಈಜಿಪ್ಟ್ ಮತ್ತು ಜೋರ್ಡನಿಗೆ ಕಳುಹಿಸಿಕೊಡಬೇಕು ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಮತ್ತು ಜೋರ್ದಾನ್ ಆಡಳಿತ ವಿರೋಧ ವ್ಯಕ್ತಪಡಿಸಿದೆ.
ಟ್ರಂಪ್ ಅವರ ಹೇಳಿಕೆಯು ಪೆಲೆಸ್ತೀನ್ ರಾಷ್ಟ್ರದ ಪರಿಕಲ್ಪನೆಯನ್ನು ದುರ್ಬಲಗೊಳಿಸುವುದಕ್ಕಷ್ಟೇ ಸಹಾಯ ಮಾಡಬಲ್ಲದು ಮತ್ತು ಗಾಝಾದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಲ್ಲುದು ಎಂದು ಈಜಿಪ್ಟ್ ಮತ್ತು ಜೋರ್ಡನ್ ಹೇಳಿದೆ.
ಇದು ಅನ್ಯಾಯವಾಗಿದೆ ಮತ್ತು ಫೆಲಸ್ತೀನಿಯರನ್ನು ಅಲ್ಲಿಂದ ತೆರವುಗೊಳಿಸುವ ಯಾವುದೇ ತಂತ್ರವನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಈಜಿಪ್ಟ್ ಅಧ್ಯಕ್ಷ ಅಲ್ ಸಿಸಿ ಹೇಳಿದ್ದಾರೆ. ಫೆಲೆಸ್ತೀನ್ ಸಮಸ್ಯೆಗೆ ಇರುವ ಏಕೈಕ ಪರಿಹಾರ ದ್ವಿರಾಷ್ಟ್ರ ಸ್ಥಾಪನೆ ಮಾಡುವುದಾಗಿದೆ ಫೆಲಸ್ತೀನಿಯರನ್ನು ಅವರ ರಾಷ್ಟ್ರದಿಂದ ತೆರವುಗೊಳಿಸುವುದಲ್ಲ ಫೆಲೆಸ್ತೀನಿಯರಿಗೆ ಅವರದೇ ಆದ ರಾಷ್ಟ್ರವನ್ನು ಕಟ್ಟಿಕೊಡುವುದೇ ಪರಿಹಾರ ಎಂದು ಸಿಸಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj