ದ್ವೇಷ ರಾಜಕಾರಣ, ಸುಳ್ಳು ಭರವಸೆಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯೆ ಕುಸಿಯಲು ಕಾರಣ: ಓವೈಸಿ ಸಂತಸ - Mahanayaka

ದ್ವೇಷ ರಾಜಕಾರಣ, ಸುಳ್ಳು ಭರವಸೆಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯೆ ಕುಸಿಯಲು ಕಾರಣ: ಓವೈಸಿ ಸಂತಸ

05/06/2024

ಕಳೆದ 10 ವರ್ಷಗಳಲ್ಲಿ ಕೇಸರಿ ಪಕ್ಷದ ದ್ವೇಷ ರಾಜಕಾರಣ ಮತ್ತು ಜನರಿಗೆ ನೀಡಿದ ಸುಳ್ಳು ಭರವಸೆಗಳ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯನ್ನು ಪಡೆದಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಗೆಲುವು ಸಾಧಿಸಿರುವ ಓವೈಸಿ, ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಆಗಲ್ಲ ಅಂದ್ರೆ ಇಂಡಿಯಾ ಮೈತ್ರಿಕೂಟಕ್ಕೆ ಅಗತ್ಯವಿದ್ದರೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.


Provided by

“ನಾವು ಬಿಜೆಪಿಯನ್ನು ನಿಲ್ಲಿಸುತ್ತೇವೆ ಎಂದು ಸಾರ್ವಜನಿಕವಾಗಿ ನಿಲುವು ತೆಗೆದುಕೊಂಡಿದ್ದೇವೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿಯ ದ್ವೇಷದ ರಾಜಕೀಯದಿಂದ ಜನರು ಬೇಸತ್ತಿದ್ದಾರೆ. ಯುವಕರು ದೇಶದಲ್ಲಿ ನಿರುದ್ಯೋಗದಿಂದ ನಿರಾಶೆಗೊಂಡಿದ್ದಾರೆ ಮತ್ತು ರೈತರು ಸಹ ಅಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಂವಿಧಾನವನ್ನು ಪ್ರೀತಿಸುವವರು ಮೋದಿಯವರ ‘400 ಪಾರ್’ ಕರೆಯನ್ನು ಸಂವಿಧಾನವನ್ನು ಮುಗಿಸಲು ಮುಂದೆ ತರಲಾಗಿದೆ ಎಂದು ಭಾವಿಸಿದ್ದಾರೆ ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ