ಟೊಯೊಟಾ ಕಾರುಗಳಿಗೆ ಭಾರೀ ಡಿಮ್ಯಾಂಡ್: ಸೆಪ್ಟಂಬರ್ ನಲ್ಲಿ ಭರ್ಜರಿ ಕಾರು ಮಾರಾಟ! - Mahanayaka

ಟೊಯೊಟಾ ಕಾರುಗಳಿಗೆ ಭಾರೀ ಡಿಮ್ಯಾಂಡ್: ಸೆಪ್ಟಂಬರ್ ನಲ್ಲಿ ಭರ್ಜರಿ ಕಾರು ಮಾರಾಟ!

Toyota
01/10/2024

ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಕಂಪನಿಯು ಸೆಪ್ಟೆಂಬರ್ 2024ರ ಸೇಲ್ಸ್ ರಿಪೋರ್ಟ್ ಪ್ರಕಟಿಸಿದೆ. ಕಂಪನಿಯು ಕಳೆದ ತಿಂಗಳು ಸಗಟು ಮಾರುಕಟ್ಟೆಯಲ್ಲಿ 26,847 ವಾಹನಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಇದು 23,802 ಯೂನಿಟ್ ಆಗಿತ್ತು. ಕಂಪನಿಯು ಕಳೆದ ತಿಂಗಳು 3045 ವಾಹನಗಳನ್ನು ರಫ್ತು ಮಾಡಿದೆಯಂತೆ. ಆಸಕ್ತಿದಾಯಕ ಸಂಗತಿಯೆಂದರೆ, ದೇಶದಲ್ಲಿ ಕಂಪನಿಯ ಎಸ್ ಯುವಿ, ಎಂಪಿವಿ ಮತ್ತು ಸಣ್ಣಕಾರು ವಿಭಾಗದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮಾರಾಟ ಹೆಚ್ಚಾಗಿದೆ. ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಶೇಕಡ 90ರಷ್ಟು ವಾಹನ ಮಾರಾಟವು ಎಸ್‌ಯುವಿ, ಎಂಪಿವಿ, ಸಣ್ಣಕಾರು ವಿಭಾಗದ್ದೇ ಆಗಿತ್ತು.

ಕಂಪನಿಯು 2024–25ರ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ 1,62,623 ವಾಹನಗಳನ್ನು ಮಾರಾಟ ಮಾಡಿದೆ. ಇದು ಕಂಪನಿಯ ಇಲ್ಲಿವರೆಗಿನ ಸ್ಟ್ರಾಂಗೆಸ್ಟ್ ಫರ್ಮಾಮೆನ್ಸ್ ಆಗಿದೆ. ಕಂಪನಿಯು ಇದಕ್ಕೂ ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 1,23,939 ಕಾರುಗಳನ್ನು ಮಾರಾಟ ಮಾಡಿತ್ತು.

ಟೊಯೊಟಾ ಕಂಪನಿಯ ಫಾರ್ಚ್ಯುನರ್ ಮತ್ತು ಟೊಯೊಟಾ ಕಾರುಗಳ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ